Friday, August 28, 2026
Homeಕರಾವಳಿಉಡುಪಿಕಾಪು: ಮಳೆ ನೀರು ತುಂಬಿ ಮಲ್ಲಾರು ಉರ್ದು ಶಾಲೆಯಲ್ಲಿ ಅವಾಂತರ ಸೃಷ್ಟಿ

ಕಾಪು: ಮಳೆ ನೀರು ತುಂಬಿ ಮಲ್ಲಾರು ಉರ್ದು ಶಾಲೆಯಲ್ಲಿ ಅವಾಂತರ ಸೃಷ್ಟಿ

- Advertisement -
- Advertisement -

ಕಾಪು:ಭಾರೀ ಮಳೆಯಿಂದಾಗಿ ಕಾಪುವಿನ ಮಲ್ಲಾರು ಮೌಲಾನಾ ಆಜಾದ್‌ ಆಂಗ್ಲ ಮಾಧ್ಯಮ ಮಾದರಿ ಶಾಲೆ ಜಲಾವೃತಗೊಂಡಿದೆ. ಶಾಲೆ ಕೊಠಡಿಯೊಳಗೆ ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ಕೊಠಡಿ ಕೋಣೆಗಳು ಬಿರುಕು ಬಿಟ್ಟಿವೆ.  ಗಾಳಿಮಳೆಯಿಂದ ಕೆಲವು ಕೋಣೆಗಳ ಮೇಲ್ಛಾವಣಿ ಹೆಂಚುಗಳು ಹಾರಿ ಹೋಗಿವೆ.

ಮಳೆ ನೀರು ಸೋರಿಕೆಯಿಂದ ತರಗತಿಗೆ ನೀರು ನುಗ್ಗಿದ್ದು ಸ್ಥಳೀಯ ಪುರಸಭಾ ಸದಸ್ಯ ನೂರುದ್ದೀನ್ ಸಹಿತ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಇದೇ ವೇಳೆ ಜಿಲ್ಲೆಯ ಉಡುಪಿ, ಕಾರ್ಕಳ ,ಕುಂದಾಪುರ ,ಬ್ರಹ್ಮಾವರ, ಪಡುವಿದ್ರೆ ಮುಂತಾದಡೆಗಳಲ್ಲೂ ಭಾರಿ ಮಳೆ ಆಗುತ್ತಿದ್ದು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೆರಡು ದಿನ ಇದೇ ರೀತಿ ಮಳೆ ಮುಂದುವರಿಯಲಿದೆ.

- Advertisement -

Latest News

error: Content is protected !!