Saturday, May 4, 2024
Homeಕರಾವಳಿಮಂಗಳೂರುಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಗೆ ಹಾಜರು:ಮುಂದಿನ ಗುರುವಾರಕ್ಕೆ ಮುಂದೂಡಿದ ಹೈಕೋರ್ಟ್

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಗೆ ಹಾಜರು:ಮುಂದಿನ ಗುರುವಾರಕ್ಕೆ ಮುಂದೂಡಿದ ಹೈಕೋರ್ಟ್

spot_img
- Advertisement -
- Advertisement -

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಪತ್ನಿ ಸರೋಜ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧಿಸಿದಂತೆ ಹೈಕೋರ್ಟ್ ಮಹೇಶ್ ಶೆಟ್ಟಿಗೆ ಖುದ್ದು ಹಾಜರಾಗಲು ಆದೇಶದಂತೆ  ಜ.5 ರಂದು (ಇಂದು) ಹೈಕೋರ್ಟ್ ಗೆ ಖುದ್ದು ಮಹೇಶ್ ಶೆಟ್ಟಿ ಮತ್ತು ಪತ್ನಿ ಸರೋಜ ಹಾಜರಾಗಿದ್ದು. ವಾದವನ್ನು ಮುಂದಿನ ವಾರಕ್ಕೆ ಕೋರ್ಟ್ ಮುಂದೂಡಿದೆ.

ಅರ್ಜಿ ನಂಬ್ರ: ಸಿ.ಸಿ.ಸಿ ೩೦೪/೨೦೨೦ ಸಂಬಂಧಿಸಿದಂತೆ ಆದೇಶ ಮಾಡಿದ ನ್ಯಾಯಮೂರ್ತಿಗಳನ್ನು ಅವ್ಯಾಚ್ಯವಾಗಿ ನಿಂದಿಸಿದ ಮಹೇಶ್ ಶೆಟ್ಟಿ ತಿಮರೋಡಿಯ ನಡತೆ ಬಗ್ಗೆ ತಿಮರೋಡಿ ಪರ ವಕೀಲರು ಹೈ ಕೋರ್ಟಿನಲ್ಲಿ ಇಂದು ತಿಮರೋಡಿ ಆ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ ಮತ್ತು ಈ ಬಗ್ಗೆ ಅವರಿಗೆ ಇನ್ನು ಈ ರೀತಿ ಮಾಡದಂತೆ ತಿಳಿ ಹೇಳುವುದಾಗಿ ನ್ಯಾಯಾಲಯದ ಜವಾಬ್ದಾರಿಯುತ ನ್ಯಾಯವಾದಿಯಾಗಿ ಹೈಕೋರ್ಟ್ಗೆ ಹೇಳಿಕೆಯನ್ನು ನೀಡಿರುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅವರನ್ನು ನ್ಯಾಯಾಲಯದ ಮುಂದೆ ಜನವರಿ 5 ತಾರೀಖಿನಂದು ಕುದ್ದು  ಹಾಜರಾಗುವಂತೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿ ಸರೋಜಗೆ ಗೌರವಾನ್ವಿತ ನ್ಯಾಯ ಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಹಾಗೂ ಟಿ. ಜಿ. ಶಿವಶಂಕರೇ ಗೌಡ ಅವರ ನ್ಯಾಯಪೀಠ ಆದೇಶ ಮಾಡಿದ್ದರು. ಅದರಂತೆ ಜ.5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ಗೆ ಹಾಜರಾಗಿದ್ದು. ಮಧ್ಯಾಹ್ನದ ನಂತರ ಸಿಟ್ಟಿಂಗ್ ಇಲ್ಲದ ಕಾರಣ ಮುಂದಿನ ವಾರ ಜ.11 ಗುರುವಾರಕ್ಕೆ ಕೋರ್ಟ್ ಮುಂದೂಡಿದೆ.ದೂರುದಾರರ ಪರವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಶ್ರೀ ಚಂದ್ರನಾಥ ಆರಿಗ ಅವರು ವಾದಿಸಿದರು.

- Advertisement -
spot_img

Latest News

error: Content is protected !!