- Advertisement -
- Advertisement -
ಕಾರ್ಕಳ: 2027ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಮನವಿ ಪತ್ರವನ್ನು ಏಲಾಚಾರ್ಯ 108 ಶ್ರೀ ಪ್ರಸಂಗಸಾಗರ ಮುನಿಮಹಾರಾಜರು ಸೆ. 25ರಂದು ಮಹಾಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು. 2027ರ ಫೆ. 18 ರಿಂದ 28ರವರೆಗೆ ಕಾರ್ಕಳ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ನಡೆಯಲಿದೆ.
ಕಾರ್ಯಕ್ರಮದಲ್ಲಿ ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಮಹಾಮಸ್ತಕಾಭಿಷೇಕ ಸಮಿತಿ ಉಪಾಧ್ಯಕ್ಷ ಪಡುಬಿದಿರೆ ರತ್ನಾಕರರಾಜ್ ಅರಸರು, ಅನಂತರಾಜ ಪೂವಾಣಿ ಹಾಗೂ ಪೆರಿಂಜೆ ಜೀವಂಧರ್ ಕುಮಾರ್ ಉಪಸ್ಥಿತರಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಡಾ. ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕೋಶಾಧಿಕಾರಿ ಮೋಹನ್ ಪಡಿವಾಳ್ ವಂದಿಸಿದರು.
- Advertisement -


