Saturday, June 13, 2026
Homeಕರಾವಳಿಬಂಟ್ವಾಳ: ಇಬ್ಬರು ಉಪತಹಶೀಲ್ದಾರ್ ಗಳ ಸಾವಿನ ಹಿಂದಿದೆಯೇ ಮಿನಿ ವಿಧಾನಸೌಧದ ವಾಸ್ತುದೋಷ ?

ಬಂಟ್ವಾಳ: ಇಬ್ಬರು ಉಪತಹಶೀಲ್ದಾರ್ ಗಳ ಸಾವಿನ ಹಿಂದಿದೆಯೇ ಮಿನಿ ವಿಧಾನಸೌಧದ ವಾಸ್ತುದೋಷ ?

- Advertisement -
- Advertisement -

ಬಂಟ್ವಾಳ: ಕಳೆದ ಕೆಲವು ತಿಂಗಳ ಹಿಂದೆ ತಾಲೂಕು ಕಚೇರಿಯ ಇಬ್ಬರು ಉಪತಹಶೀಲ್ದಾರ್ ಗಳು ಅನಾರೋಗ್ಯದಿಂದ ಮೃತಪಟ್ಟಿರುವ ಹಿನ್ನಲೆಯಲ್ಲಿ ನಡೆಸಿರುವ ಪ್ರಶ್ನಾಚಿಂತನೆಯಲ್ಲಿ ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ವಾಸ್ತುದೋಷ ಕಂಡು ಬಂದಿತ್ತು. ಹಾಗಾಗಿ ಇಂದು ಅದರ ಪರಿಹಾರಾರ್ಥವಾಗಿ ಮಹಾ ಮೃತ್ಯುಂಜಯ ಹೋಮ ನಡೆಸಲಾಗಿದೆ.

ಶ್ರೀ ವೆಂಕಟರಮಣ ಮುಚ್ಚಿನ್ನಾಯರ ಪ್ರಶ್ನಾಚಿಂತನೆಯಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ವಾಸ್ತುದೋಷ ಕಂಡು ಬಂದಿದೆ ಎಂದು ಸಂಕಲ್ಪಿಸಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿಯಲ್ಲಿ ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದ ಮನೋಹರ್ ತಂತ್ರಿಗಳ ವೈದಿಕ ವಿಧಿ ವಿಧಾನದಲ್ಲಿ ಇಂದು ಮಹಾ ಮೃತ್ಯುಂಜಯ ಹೋಮ ನಡೆಯಿತು.

- Advertisement -

Latest News

error: Content is protected !!