Thursday, June 4, 2026
Homeಕರಾವಳಿದಕ್ಷಿಣ ಕನ್ನಡ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾಗಿ ಲುಕ್ಮಾನ್ ಬಂಟ್ವಾಳ ಆಯ್ಕೆ

ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾಗಿ ಲುಕ್ಮಾನ್ ಬಂಟ್ವಾಳ ಆಯ್ಕೆ

- Advertisement -
- Advertisement -

ಮಂಗಳೂರು: ತಿಂಗಳ ಹಿಂದೆ ನಡೆದಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ತೀವ್ರ ಪೈಪೋಟಿಯ ಫಲಿತಾಂಶ ಪ್ರಕಟಗೊಂಡಿದ್ದು, ದ.ಕ ಜಿಲ್ಲಾಧ್ಯಕ್ಷರಾಗಿ ಲುಕ್ಮಾನ್ ಬಂಟ್ವಾಳ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.

ಚುನಾವಣೆಯು ಪಾರದರ್ಶಕವಾಗಿರಬೇಕು ಎಂಬ ನಿಟ್ಟಿನಲ್ಲಿ ಜನವರಿ 10, 11 ಹಾಗೂ 12ನೇ ತಾರೀಕಿನಂದು ಯುವ ಕಾಂಗ್ರೆಸ್ ಬ್ಲಾಕ್, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಚುನಾವಣೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಸಲಾಗಿತ್ತು. ಅಧ್ಯಕ್ಷರಾಗಿ ಆಯ್ಕೆಯಾದ ಲುಕ್ಮಾನ್ ಬಂಟ್ವಾಳ 5573 ಮತ ಗಳಿಸಿದ್ದು, ಉಪಾಧ್ಯಕ್ಷರಾಗಿ ಗಿರೀಶ್ ಆಳ್ವಾ 4169 ಮತಗಳನ್ನು ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶುಹೈಬ್ ಆಯ್ಕೆಯಾಗಿದ್ದಾರೆ ಎಂದು ಯುವ ಕಾಂಗ್ರೆಸ್ ಅಧಿಕೃತ ಜಾಲತಾಣದಲ್ಲಿ ಘೋಷಿಸಿದೆ.

- Advertisement -

Latest News

error: Content is protected !!