- Advertisement -
![]()
- Advertisement -
ನವದೆಹಲಿ : ಮಾರಕ ಕೊರೊನ ಲಾಕ್ ಡೌನ್ 5.0 ರ ಮೊದಲ ದಿನದಂದು ಸಾಮಾನ್ಯ ಜನರಿಗೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಿಸಿ ಶಾಕ್ ನೀಡಿವೆ . ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 11.50 ರೂಪಾಯಿ ಹೆಚ್ಚಾಗಿದೆ.
ಇತರ ನಗರಗಳಲ್ಲಿಯೂ ಸಹ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂದಿನಿಂದ ಹೆಚ್ಚಿಸಲಾಗಿದೆ. ಈ ಮೊದಲು ಮೇ ತಿಂಗಳಲ್ಲಿ 162.50 ರೂಪಾಯಿವರೆಗೆ ಬೆಲೆ ಇಳಿಕೆಯಾಗಿತ್ತು. ಅದೇ ಸಮಯದಲ್ಲಿ, 19 ಕೆಜಿ ಸಿಲಿಂಡರ್ ಬೆಲೆ 1139.50 ರೂಪಾಯಿಗೆ ಏರಿದೆ.
ಈಗ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 593 ರೂಪಾಯಿಗೆ ಬಂದು ನಿಂತಿದೆ. ಅದು ಈ ಹಿಂದೆ 581.50 ರೂಪಾಯಿಯಿತ್ತು. ಜೂನ್ 1 ರಂದು ವಿಮಾನ ಇಂಧನ ಬೆಲೆಯೂ ಹೆಚ್ಚಾಗಿದೆ.
- Advertisement -


