Friday, May 17, 2024
Homeತಾಜಾ ಸುದ್ದಿಅಯ್ಯೋ ಎಂಥಾ ಕಾಲ ಬಂತಪ್ಪ!: ವಾಲೆಂಟೈನ್ಸ್ ಗೆ ಬೇಕಾದ್ರೆ ಬಾಡಿಗೆಗೆ ಸಿಕ್ತಾನೆ ಲವ್ವರ್...

ಅಯ್ಯೋ ಎಂಥಾ ಕಾಲ ಬಂತಪ್ಪ!: ವಾಲೆಂಟೈನ್ಸ್ ಗೆ ಬೇಕಾದ್ರೆ ಬಾಡಿಗೆಗೆ ಸಿಕ್ತಾನೆ ಲವ್ವರ್…

spot_img
- Advertisement -
- Advertisement -

ಇನ್ನೇನು ವಾಲೆಂಟೈನ್ಸ್ ಡೇಗೆ ಕೆಲವೇ ದಿನಗಳು ಬಾಕಿ ಇದೆ. ಪ್ರೇಮಿಗಳು ಈ ಬಾರಿಯ ವಾಲೆಂಟೈನ್ಸ್ ನ್ನು ಹೇಗೆ ಆಚರಿಸೋದು ಅಂತಾ ಯೋಚ್ನೆ ಮಾಡುತ್ತಿದ್ದಾರೆ. ಇನ್ನು ಲವ್ವರ್ ಇಲ್ಲದವರು ಇಲ್ವಲ್ಲಾ ಅಂತಾ ಬೇಸರ ಮಾಡಿಕೊಳ್ಳುವ ಹುಡುಗಿಯರಿಗೆ ನಾನಿದ್ದೇನೆ ಅಂತಿದ್ದಾನೆ ಇಲ್ಲೊಬ್ಬ ಭೂಪ..

 ಹೌದು.. ನೀವು ಬಾಡಿಗೆ ಕೊಟ್ಟರೆ ನಾನು ಬಾಯ್​ಫ್ರೆಂಡ್​ ಆಗೋಕೆ ರೆಡಿ ಇದ್ದೀನಿ ಎಂದು ಬೋರ್ಡ್​ ಹಿಡಿದುಕೊಂಡು ತಿರುಗುತ್ತಾ ಇದ್ದಾನೆ ಯುವಕನೊಬ್ಬ. ಅಂದಹಾಗೆ ಈತ ಈ ಉದ್ಯಮವನ್ನ ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಬಂದಿದ್ದಾನೆ.

ಅಂದಹಾಗೆ ಈ ಬಾಡಿಗೆ ಬಾಯ್​ಫ್ರೆಂಡ್​ನ ಹೆಸರು ಶಕುಲ್. ಅನೇಕರಿಂದ ತಿರಸ್ಕರಿಸಲ್ಪಟ್ಟು ಪ್ರೀತಿಯಲ್ಲಿ ಹಲವಾರು ಬಾರಿ ವಿಫಲನಾದ ಬಳಿಕ ಬೇಸತ್ತು ಶಕುಲ್​ ಈ ಉದ್ಯಮವನ್ನ ಆರಂಭಿಸಿದ್ದಾನಂತೆ.

ಪ್ರತಿ ಬಾರಿ ವ್ಯಾಲೆಂಟೈನ್ಸ್​ ಡೇ ಬಂದಾಗಲೂ ಪ್ರೇಮ ನಿವೇದನೆ ವಿಚಾರದಲ್ಲಿ ತಾನೆಷ್ಟು ನತದೃಷ್ಟ ಎಂದು ಶಕುಲ್​​ಗೆ ​ಅನಿಸುತ್ತಂತೆ. ಶಕುಲ್​​ ಇಲ್ಲಿಯವರೆಗೆ ಪ್ರೇಮ ನಿವೇದನೆ ಮಾಡಿದ ಪ್ರತಿಯೊಬ್ಬ ಹುಡುಗಿಯರೂ ಈತನನ್ನ ನಿರಾಕರಿಸಿದ್ದು ಕೇವಲ ನಿನ್ನ ಸ್ನೇಹ ಮಾತ್ರ ಸಾಕು ಎಂದು ಹೇಳಿದ್ದಾರಂತೆ.

ಇಷ್ಟೆಲ್ಲಾ ಕತೆ ಬಳಿಕ ಒಂದಿನ ಶಕುಲ್​​ಗೆ ನನ್ನಂತೆ ಕೆಲ ಹುಡುಗಿಯರಿಗೂ ಇಂತಹ ಅನುಭವ ಆಗಿರಬಹುದು. ಅವರನ್ನೂ ಅನೇಕರು ನಿರಾಕರಿಸಿದ್ದಿರಬಹುದು ಎಂದು ಅನಿಸಿತಂತೆ.

ಹೀಗಾಗಿ ಕಳೆದ ಮೂರು ವರ್ಷಗಳಿಂದ ಈತ ವ್ಯಾಲೆಂಟೈನ್ಸ್​ ಡೇಯಂದು ಬಾಡಿಗೆ ಬಾಯ್​ಫ್ರೆಂಡ್ ಆಗಿ ಕೆಲಸ ಮಾಡುತ್ತಾನೆ. ಈತನಿಗೆ ಈಗ ಅನೇಕ ಮಹಿಳೆಯರು ಹಾಗೂ ಯುವತಿಯರು ಬಾಡಿಗೆಗೆ ಬೇಕೆಂದು ಮೆಸೇಜ್​ ಮಾಡುತ್ತಾರಂತೆ. ಕಳೆದ ಮೂರು ವರ್ಷಗಳಲ್ಲಿ ಈತ 45ಕ್ಕೂ ಹೆಚ್ಚು ಮಹಿಳೆಯರ ಜೊತೆ ಡೇಟಿಂಗ್​ ಮಾಡಿದ್ದಾನಂತೆ.

- Advertisement -
spot_img

Latest News

error: Content is protected !!