Wednesday, June 3, 2026
Homeಚಿಕ್ಕಮಗಳೂರುಕೊಟ್ಟಿಗೆಹಾರ : ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಅಡ್ಡಗಟ್ಟಿ ದರೋಡೆ

ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಅಡ್ಡಗಟ್ಟಿ ದರೋಡೆ

- Advertisement -
- Advertisement -

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ನಲ್ಲಿ ಫೆ.4 ರಂದು ಬುಧವಾರ ನಡುರಾತ್ರಿ ಚಲಿಸುತ್ತಿದ್ದ ಲಾರಿಯನ್ನು ಮುಸುಕುಧಾರಿಗಳು ಅಡ್ಡಗಟ್ಟಿ 1 ಲಕ್ಷದ 61 ಸಾವಿರ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಬೈಕ್ ನಲ್ಲಿ ಬಂದ ಮುಸುಕುಧಾರಿಗಳು ಕೊಟ್ಟಿಗೆಹಾರ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ  ಮೀನು ಸಾಗಾಟದ ಲಾರಿಯನ್ನು ಅಣ್ಣಪ್ಪ ದೇವಸ್ಥಾನದಿಂದ ಎರಡು ಕಿ.ಮೀ. ಹಿಂದೆಯೇ ತಡೆದು ಲಾರಿಯ ಚಾಲಕನ ಬದಿಯ ಗಾಜು ಪುಡಿಮಾಡಿ ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ವಾಹನದ ಚಾಲಕ ಸಲಾಂ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಬಣಕಲ್ ಪೊಲೀಸರು  ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!