Friday, May 17, 2024
Homeಕರಾವಳಿಸುಂಟಿಕೊಪ್ಪ ಬಳಿ ಕೋಳಿ ಆಹಾರ ಸಾಗಿಸುತ್ತಿದ್ದ ಲಾರಿ ಪಲ್ಟಿ: ಲಾರಿಯಡಿ ಸಿಲುಕಿ ವಿಟ್ಲ ಮೂಲದ ಚಾಲಕ...

ಸುಂಟಿಕೊಪ್ಪ ಬಳಿ ಕೋಳಿ ಆಹಾರ ಸಾಗಿಸುತ್ತಿದ್ದ ಲಾರಿ ಪಲ್ಟಿ: ಲಾರಿಯಡಿ ಸಿಲುಕಿ ವಿಟ್ಲ ಮೂಲದ ಚಾಲಕ ಸಾವು

spot_img
- Advertisement -
- Advertisement -

ಮಡಿಕೇರಿ: ರಸ್ತೆ ಅಪಘಾತದಲ್ಲಿ ವಿಟ್ಲ ಮೂಲದ ಲಾರಿ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ.

ಕೋಳಿ ಆಹಾರ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ವಿಟ್ಲದ ನಾಗಭೂಷಣ ಎಂಬ ಚಾಲಕ ಮೃತಪಟ್ಟಿದ್ದಾರೆ.

ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿ 175 ರಲ್ಲಿ ಘಟನೆ ನಡೆದಿದ್ದು, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಬಳಿ ಅಪಘಾತ ಸಂಭವಿಸಿದೆ.

ಲಾರಿಯಡಿ ಸಿಲುಕಿದ್ದ ಚಾಲಕನ ಮೃತದೇಹ ಹೊರ ತೆಗೆಯಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.ಸುಂಟಿಕೊಪ್ಪ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -
spot_img

Latest News

error: Content is protected !!