- Advertisement -
![]()
- Advertisement -
ಉಡುಪಿ: ಮದ್ಯ ಸೇವನೆಯ ಅಮಲಿನಲ್ಲಿ ಲಾರಿ ಚಾಲಕ ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡಿದ ಪರಿಣಾಮ ಲಾರಿ ಮಧ್ಯ ರಸ್ತೆಯಲ್ಲೇ ಮಗುಚಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಸಂಭವಿಸಿದೆ.
ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಡುಪಿ ತಾಲೂಕಿನ ಗುಡ್ಡೆಯಂಗಡಿ ಬಳಿ ಈ ಅಪಘಾತ ನಡೆದಿದ್ದು,ಹಿರಿಯಡ್ಕದಿಂದ ಕಾರ್ಕಳ ಕಡೆಗೆ ಅತಿ ವೇಗವಾಗಿ ಲಾರಿ ಸಂಚರಿಸುತ್ತಿತ್ತು ಎನ್ನಲಾಗಿದೆ.
ತುಂಬಾ ಅಪಾಯಕಾರಿಯಾದ ರೀತಿಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ಸಂಪೂರ್ಣವಾಗಿ ಮಗುಚಿ ಬಿದ್ದಿದೆ.
ಅಪಘಾತ ಸಂಭವಿಸಿದ ಸಮಯದಲ್ಲಿ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರ ಇಲ್ಲದ ಕಾರಣ ಹೆಚ್ಚಿ ಅನಾಹುತ ತಪ್ಪಿ ಹೋಗಿದೆ.
- Advertisement -


