Sunday, May 19, 2024
Homeಕರಾವಳಿಮರ್ಕಂಜದಲ್ಲಿ ಗಣಿಕಾರಿಕೆ ನಿಲ್ಲಿಸುವಂತೆ ಸ್ಥಳಿಯರ ಆಗ್ರಹ: ಮಳೆಯ ನಡುವೆಯು ಧರಣಿ ಕೂತ ಗ್ರಾಮಸ್ಥರು: ಅಂಬೇಡ್ಕರ್ ಸಂರಕ್ಷಣಾ...

ಮರ್ಕಂಜದಲ್ಲಿ ಗಣಿಕಾರಿಕೆ ನಿಲ್ಲಿಸುವಂತೆ ಸ್ಥಳಿಯರ ಆಗ್ರಹ: ಮಳೆಯ ನಡುವೆಯು ಧರಣಿ ಕೂತ ಗ್ರಾಮಸ್ಥರು: ಅಂಬೇಡ್ಕರ್ ಸಂರಕ್ಷಣಾ ವೇದಿಕೆ ಬೆಂಬಲ

spot_img
- Advertisement -
- Advertisement -
ಮರ್ಕಂಜ: ಮರ್ಕಂಜದಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿದ ಸ್ಥಳೀಯರು ಮಳೆಯನ್ನು ಲೆಕ್ಕಿಸದೆ ಧರಣಿಯಲ್ಲಿ ತೊಡಗಿದ್ದಾರೆ. ಇಲ್ಲಿನ ಅಳವುಪಾರ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ನಡೆಸಿದ ಬೆನ್ನಲ್ಲೇ ಗ್ರಾಮಸ್ಥರಿಂದ ಧರಣಿ ಆರಂಭಗೊಂಡಿದೆ.

ಈ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸ್ಥಳೀಯರಿಗೆ, ಧಾರ್ಮಿಕ ಕಟ್ಟಡಗಳಿಗೆ, ಶಾಲೆ ಹಾಗೂ ಜನವಸತಿ ಪ್ರದೇಶಕ್ಕೆ ಹಾನಿಯಾಗುತ್ತಿದ್ದು, ಆದ್ದರಿಂದ ತಕ್ಷಣವೇ ಗಣಿಗಾರಿಕೆ ನಿಲ್ಲಿಸುವಂತೆ ಅಂಬೇಡ್ಕರ್ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಮರ್ಕಂಜದ ಹಳೆ ವಿದ್ಯಾರ್ಥಿ ಸಂಘ, ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮಳೆಯನ್ನೂ ಲೆಕ್ಕಿಸದೆ ಧರಣಿಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಗಣಿಗಾರಿಕೆಗೆ ಮರ್ಕಂಜದ ಅಳವುಪಾರ ಪಂಚಾಯತ್ ನ ಪರವಾನಗಿ ನವೀಕರಣವಾಗಿಲ್ಲ. ಗಣಿಗಾರಿಕೆಯಿಂದ ಜನವಸತಿ ಪ್ರದೇಶ ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿ ತಕ್ಷಣವೇ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಗಣಿಗಾರಿಕೆ ಇಲಾಖಾ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು, ಈ ಕುರಿತು ವರದಿ ಬರುವವರೆಗೂ ಗಣಿ ಬಂದ್ ಮಾಡಲು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!