Thursday, June 4, 2026
Homeತಾಜಾ ಸುದ್ದಿತಾಲೂಕು ಕಚೇರಿ ಕಟ್ಟಡದಲ್ಲಿ ಕೈಕೊಟ್ಟ ಲಿಫ್ಟ್; ಅರ್ಧ ಗಂಟೆ ಲಿಫ್ಟ್ ನಲ್ಲಿ ಪರದಾಡಿದ ಜನತೆ

ತಾಲೂಕು ಕಚೇರಿ ಕಟ್ಟಡದಲ್ಲಿ ಕೈಕೊಟ್ಟ ಲಿಫ್ಟ್; ಅರ್ಧ ಗಂಟೆ ಲಿಫ್ಟ್ ನಲ್ಲಿ ಪರದಾಡಿದ ಜನತೆ

- Advertisement -
- Advertisement -

ಉಡುಪಿ: ನಾಲ್ಕು ಮಂದಿ ಲಿಫ್ಟ್ ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮವಾಗಿ, ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡು, ಅರ್ಧ ಗಂಟೆಗಳ ಕಾಲ ಪರದಾಡಿದ ಆತಂಕಕಾರಿ ಘಟನೆ ಗುರುವಾರದಂದು ಬೆಳಿಗ್ಗೆ 10.30 ರ ಸುಮಾರಿಗೆ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿ ಕಟ್ಟಡ ಸಂಕೀರ್ಣದಲ್ಲಿ ನಡೆದಿದೆ.

ಜನತೆ ತಾಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಜನರೇಟರಿಗೆ ಇಂಧನ ಇಲ್ಲದೆ, ತುರ್ತು ನಿರ್ಗಮನ ವ್ಯವಸ್ಥೆಯು ಇಲ್ಲದೆ ಇರುವುದು ಎನ್ನಲಾಗಿದೆ.

ಸರಕಾರಿ ಕೆಲಸ ಕಾರ್ಯಗಳಿಗೆಂದು ಬರುವ ಜನತೆ ಬೆಳಿಗ್ಗೆನಿಂದ ಸಾಯಂಕಾಲದವರೆಗೆ ಲಿಫ್ಟ್ ವ್ಯವಸ್ಥೆಯನ್ನು ಬಳಸುತ್ತಿದ್ದು, ಆಕಸ್ಮಿಕವಾಗಿ ಏನಾದರೂ ತಾಂತ್ರಿಕ ತೊಂದರೆ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಲಿಫ್ಟ್ ನ ಒಳಗಿದ್ದವರು ತೊಂದರೆಗೆ ಒಳಗಾಗುವಂತಾಗಿದೆ.

 ಈ ಬಗ್ಗೆ ಉಡುಪಿ ತಾಲೂಕು ತಹಶೀಲ್ದಾರ್ ರವರು ಕೂಡಲೇ ಲಿಫ್ಟ್ ನಿರ್ವಹಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮುಂದೆ ಎಂದೂ ಇಂತಹ ದುರ್ಘಟನೆ ನಡೆಯದ ಹಾಗೆ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ ಎಂದು ತೊಂದರೆಗಳಾದ ಮೂಡಬಿದ್ರೆಯ ವಿಶ್ವಕುಮಾರ್ ಭಟ್ ಅವರು ಉಡುಪಿ ತಹಶೀಲ್ದಾರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.

- Advertisement -

Latest News

error: Content is protected !!