Thursday, June 4, 2026
Homeಕರಾವಳಿಮಂಗಳೂರು: ಮುಲ್ಕಿಯಲ್ಲಿ ಅಡುಗೆ ಮನೆಗೆ ನುಗ್ಗಿದ ಚಿರತೆ

ಮಂಗಳೂರು: ಮುಲ್ಕಿಯಲ್ಲಿ ಅಡುಗೆ ಮನೆಗೆ ನುಗ್ಗಿದ ಚಿರತೆ

- Advertisement -
- Advertisement -

ಮಂಗಳೂರು: ಚಿರತೆಯೊಂದು ಅಡುಗೆ ಕೋಣೆಗೆ ನುಗ್ಗಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ.

ಮುಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆ ನುಗ್ಗಿದೆ.  ಸದಾನಂದ ಕೋಟ್ಯಾನ್‌ ಎಂಬವರ  ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ. ಈ ವೇಳೆ ನಾಯಿ ಬೊಗಳಲು ಆರಂಭಿಸಿದ್ದು, ಮನೆಮಂದಿ ಚಿರತೆ ನೋಡಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿ ಸುಮಾರು 5 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಬೋನಿನೊಳಗೆ ಬಿದ್ದಿದೆ.

- Advertisement -

Latest News

error: Content is protected !!