Wednesday, June 3, 2026
Homeಕರಾವಳಿಕಡಬ; ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಬಿದ್ದ ಮಹಿಳೆ

ಕಡಬ; ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಬಿದ್ದ ಮಹಿಳೆ

- Advertisement -
- Advertisement -

ಕಡಬ; ಚಲಿಸುತ್ತಿದ್ದ ಬಸ್ಸಿನಿಂದ ಮಹಿಳೆ ರಸ್ತೆಗೆ ಬಿದ್ದ ಘಟನೆ ಆಲಂಕಾರು ಬಳಿ ಗುರುವಾರ ನಡೆದಿದೆ.

ಶಾರದಾ ನಗರದ ಗುಲಾಬಿ ಎಂಬವರು ಗೋಳಿತ್ತಡಿ ಎಂಬಲ್ಲಿಂದ ಬಸ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಆಲಂಕಾರಿನ ಮುಖ್ಯ ಪೇಟೆ ಸಮೀಪಿಸುತ್ತಿದಂತೆ ಬಸ್ಸಿನಿಂದ ಕೆಳಗೆ ಬಿದ್ದಿದ್ದಾರೆ.

ತಕ್ಷಣ ಅವರಿಗೆ ಸ್ಥಳೀಯ ಕ್ಲಿನಿಕ್‌ ನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಸ್ಸಿನ ಚಾಲಕ ಶಿವಕುಮಾರ್‌ 108 ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಂಗಳೂರು ಕೇಂದ್ರ ನಿಲ್ದಾಣದಿಂದ ಹೊರಟ ಬಸ್ ಉಪ್ಪಿನಂಗಡಿ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.

- Advertisement -

Latest News

error: Content is protected !!