Friday, May 17, 2024
Homeಕರಾವಳಿಬಂಟ್ವಾಳ: ನರಿಕೊಂಬು ಗ್ರಾಮದಲ್ಲಿ ದೈವಸ್ಥಾನದ ತಡೆಗೋಡೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಶಿಲಾನ್ಯಾಸ

ಬಂಟ್ವಾಳ: ನರಿಕೊಂಬು ಗ್ರಾಮದಲ್ಲಿ ದೈವಸ್ಥಾನದ ತಡೆಗೋಡೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಶಿಲಾನ್ಯಾಸ

spot_img
- Advertisement -
- Advertisement -

ಬಂಟ್ವಾಳ: ನರಿಕೊಂಬು ಗ್ರಾಮ ಕೇದಿಗೆ ಶ್ರೀ ವೀರಭದ್ರ ದೇವರು, ನಾಲ್ಕೈತ್ತಾಯ, ಪಂಜುರ್ಲಿ, ಮಹಾಂಕಾಳಿ ದೈವಂಗಳ ಕ್ಷೇತ್ರದ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಡೆಗೋಡೆ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶಿಲಾನ್ಯಾಸ ನೆರವೇರಿಸಿದರು.

ಅರ್ಚಕ ವಾಸುದೇವ ಕಾರಂತ್ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದ ಜಗನ್ನಾಥ ಬಂಗೇರ ನಿರ್ಮಲ್, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ವಿನುತಾ ಪುರುಷೋತ್ತಮ್, ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು, ಸದಸ್ಯರಾದ ರವಿ ಅಂಚನ್, ನಾರಾಯಣ ಪೂಜಾರಿ ದರ್ಕಾಸು, ರಂಜಿತ್ ಕೆದ್ದೇಲು, ಉಷಾಲಾಕ್ಷಿ, ಅಭಿವೃದ್ಧಿ ಅಽಕಾರಿ ಶಿವಗೊಂಡಪ್ಪ ಬಿರಾದಾರ್, ಪ್ರಮುಖರಾದ ರಘು ಸಪಲ್ಯ ನರಿಕೊಂಬು, ಕೃಷ್ಣಪ್ಪ ಗಾಣಿಗ ಮಾಣಿಮಜಲು, ಪ್ರೇಮನಾಥ ಶೆಟ್ಟಿ ಅಂತರ, ಪುರುಷೋತ್ತಮ ಸಾಲ್ಯಾನ್, ಸುರೇಶ್ ಕೋಟ್ಯಾನ್, ರಾಜೇಶ್ ಬೋಳಂತೂರು, ರಂಜಿತ್ ಮಾಣಿಮಜಲು, ಶ್ರೀಶ ರಾಯಸ, ಕೃಷ್ಣಾನಂದ, ಕೊರಗಪ್ಪ ಪೂಜಾರಿ ಕೆದ್ದೇಲು, ಲೋಕೇಶ್ ಪಾಣೆಮಂಗಳೂರು, ಸುಧೀರ್ ನಿರ್ಮಲ್, ಸೀತಾರಾಮ ದೋಟ, ಮಹೇಶ್ ರಾಯಸ, ಕಮಲಾಕ್ಷ ಶಂಭೂರು, ನವೀನ್ ಮಾಣಿಮಜಲು, ಮನೋಜ್ ಕೇದಿಗೆ, ರಾಧಾಕೃಷ್ಣ ಕೇದಿಗೆ, ಹರ್ಷಕಿರಣ್ ದೋಟ ಮೊದಲಾದವರಿದ್ದರು.

- Advertisement -
spot_img

Latest News

error: Content is protected !!