Wednesday, May 15, 2024
Homeಇತರತಿರುವನಂತಪುರ : ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ ಆರಂಭ...!

ತಿರುವನಂತಪುರ : ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ ಆರಂಭ…!

spot_img
- Advertisement -
- Advertisement -

ತಿರುವನಂತಪುರ : ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ ಗುರುವಾರದಿಂದ ಆರಂಭಗೊಂಡಿದೆ. ಈ ಸೌಲಭ್ಯವು ತಿರುವನಂತಪುರಂ, ಪತ್ತಣಂತಿಟ್ಟ, ಎರುಮೇಲಿ, ಕುಮಿಲಿ, ನೀಲಕ್ಕಲ್, ಕೊಟ್ಟರಕ್ಕರ, ಪಂದಲ, ವಲಿಯ ಕೊಯಿಕ್ಕಲ್ ಪ್ಯಾಲೆಸ್,ಚೆಂಗನ್ನೂರು, ಎಟ್‌ಮಾನೂರು ಮತ್ತು ಪರುಂಬವೂರು ಇಲ್ಲಿ ಲಭ್ಯವಿವೆ.

ಈ ಹಿಂದೆ ರಾಜ್ಯ ಸರಕಾರ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಶಬರಿಮಲೆ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿತ್ತು, ಈ ವ್ಯವಸ್ಥೆಯ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ರಾಜ್ಯ ಸರಕಾರ ಹೊಸ ಸ್ಮಾರ್ಟ್ ಬುಕಿಂಗ್ ಕುರಿತು ಮಾಹಿತಿ ನೀಡಿದೆ.

ಸ್ಮಾರ್ಟ್ ಬುಕಿಂಗ್ ಜತೆಗೆ ಈ ಹಿಂದಿನ ವರ್ಚುವಲ್ ವ್ಯವಸ್ಥೆ ಮುಂದುವರಿಯಲಿದೆ. ವರ್ಚುವಲ್ ಕ್ಯೂ ಬುಕಿಂಗ್ ಅನ್ನು ಯಾರಾದರೂ ರದ್ದುಗೊಳಿಸಿದಲ್ಲಿ ಆ ಸ್ಪಾಟ್ ಅನ್ನು ಸ್ಪಾಟ್ ಬುಕಿಂಗ್ ಮೂಲಕ ಒದಗಿಸಲಾಗುತ್ತದೆ.

ಸ್ಪಾಟ್ ಬುಕಿಂಗ್ ಸಂದರ್ಭ ಯಾತ್ರಾರ್ಥಿಗಳು ತಮ್ಮ ಆಧಾರ್‌, ಮತದಾರರ ಗುರುತುಪತ್ರ ಅಥವಾ ಪಾಸ್ಪೋರ್ಟುಗಳನ್ನು ಹಾಜರುಪಡಿಸಬಹುದು. ಎರಡೂ ಡೋಸ್ ಕೋವಿಡ್ ಲಸಿಕೆ ನಡೆದ ಪ್ರಮಾಣಪತ್ರ ಆರ್‌ಟಿ ಪಿಸಿಆರ್ ನಗೆಟಿವ್ ವರದಿ ಹಾಜರುಪಡಿಸಬೇಕಿದೆ.

- Advertisement -
spot_img

Latest News

error: Content is protected !!