Monday, June 15, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತ; ವಾಹನ ಸಂಚಾರ ಸಂಪೂರ್ಣ ಬಂದ್

ಬೆಳ್ತಂಗಡಿ: ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತ; ವಾಹನ ಸಂಚಾರ ಸಂಪೂರ್ಣ ಬಂದ್

- Advertisement -
- Advertisement -

ಬೆಳ್ತಂಗಡಿ:  ಕರಾವಳಿಯಲ್ಲಿ ವರುಣ ಆರ್ಭಟ ಜೋರಾಗಿದ್ದು, ಸಾಕಾಪ್ಪ ನಿನ್ನ ಸಹವಾಸ ಅಂತಾ ಮಳೆರಾಯನಿಗೆ ಜನ ಶಪಿಸುವಂತಾಗಿದೆ. ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿದ್ದು ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತವಾಗಿದೆ. ಪರಿಣಾಮ ವಾಹನ ಸಂಚಾರ ಸoಪೂರ್ಣ ಬಂದ್ ಆಗಿದೆ.

ಇನ್ನು ರಸ್ತೆ ಸಂಪೂರ್ಣ ಬಂದ್ ಆಗಿರುವ ಬಗ್ಗೆ ಬಂದಾರು ಗ್ರಾಮ ಪಂಚಾಯಿತಿ ವತಿಯಿಂದ ಬಂದಾರು ಹಾಗೂ ಪೆರ್ಲ ಬೈಪಾಡಿಯಲ್ಲಿ ಪ್ರಕಟಣೆಯ ಬ್ಯಾನರ್ ಅಳವಡಿಸಲಾಗಿದೆ. ಸಂಪೂರ್ಣ ಮಣ್ಣು ತೆರವು ಕಾರ್ಯ ನಡೆಯುವರೆಗೆ ಬಂದಾರು -ಕುಂಟಾಲಪಲ್ಕೆ -ಪೆರ್ಲ ಬೈಪಾಡಿ ಸಂಚರಿಸುವ ಪ್ರತಿಯೊಂದು ವಾಹನಗಳು ಮೈರೋಳ್ತಡ್ಕ -ಶಿವನಗರ – ಪೆರ್ಲಬೈಪಾಡಿ ಮಾರ್ಗವಾಗಿ ಸಂಚರಿಸಲು ಮನವಿ ಮಾಡಲಾಗಿದೆ.

- Advertisement -

Latest News

error: Content is protected !!