Sunday, June 29, 2025
Homeಆರಾಧನಾಧರ್ಮಸ್ಥಳದಲ್ಲಿ ಇಂದಿನಿಂದ ಡಿ.1 ರ ವರೆಗೆ ಲಕ್ಷದೀಪೋತ್ಸವ

ಧರ್ಮಸ್ಥಳದಲ್ಲಿ ಇಂದಿನಿಂದ ಡಿ.1 ರ ವರೆಗೆ ಲಕ್ಷದೀಪೋತ್ಸವ

spot_img
- Advertisement -
- Advertisement -

ಬೆಳ್ತಂಗಡಿ: ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ಡಿ.1 ರ ವರೆಗೆ ಕಾರ್ತಿಕ ಮಾಸದ ಮಂಗಳ ಪರ್ವದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನಡೆಯಲಿದೆ.

ಕಾರ್ಯಕ್ರಮಗಳ ಪಟ್ಟಿ ಹೀಗಿದೆ: ನ.26ರಂದು ಹೊಸಕಟ್ಟೆ ಉತ್ಸವ ನಡೆಯಲಿದೆ. ರಾಜ್ಯಮಟ್ಟದ ವಸ್ತುಪ್ರದರ್ಶನವು ಬೆಳಗ್ಗೆ 10.30ಕ್ಕೆ ಧರ್ಮಸ್ಥಳದಲ್ಲಿರುವ ಪ್ರೌಢಶಾಲಾ ವಠಾರದಲ್ಲಿ ಉದ್ಘಾಟನೆಗೊಳ್ಳಲಿದೆ. ಸಂಜೆ 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ 25 ಸಾವಿರಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸುವರು.

ನ.27ರಂದು ಕೆರೆಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿಮಾರುಕಟ್ಟೆ ಉತ್ಸವ. ಸಂಜೆ 4 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ. ನ.30ರಂದು ಗೌರಿಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ), ಸಂಜೆ 4 ಗಂಟೆಯಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಡಿ. 1ರಂದು ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ ನೆರವೇರಲಿದೆ.

- Advertisement -
spot_img

Latest News

error: Content is protected !!