Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ; ಅನೈತಿಕ ಸಂಬಂಧದಿಂದ ಪತ್ನಿ ಮಿಸ್ಸಿಂಗ್ ಎಂದು ಪತಿ ಆರೋಪ

ಮಂಗಳೂರಿನಲ್ಲಿ ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ; ಅನೈತಿಕ ಸಂಬಂಧದಿಂದ ಪತ್ನಿ ಮಿಸ್ಸಿಂಗ್ ಎಂದು ಪತಿ ಆರೋಪ

- Advertisement -
- Advertisement -

ಮಂಗಳೂರು; ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಇಲ್ಲಿನ ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿ ವಾಸವಾಗಿರುವ ಸಲೀಂ ಎಂಬವರ ಪತ್ನಿ ಝೀನತ್(34) ತಮ್ಮ ಮಕ್ಕಳಾದ ಅಬ್ದುಲ್ ಸಮದ್ (11), ನೆಬಿಸಾ ಸಫ್ನಾಜ್(10), ಮಹಮ್ಮದ್ ತೆಹನಾಜ್ (7)ಇವರೊಂದಿಗೆ ನಾಪತ್ತೆಯಾಗಿದ್ದಾರೆ. ಝೀನತ್ ಮಾರ್ಚ್ 31 ರಂದು ಶಾಲೆಗೆ ತೆರಳಿ ಅಲ್ಲಿಂದಲೇ ಮೂವರು ಮಕ್ಕಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾರೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ತನ್ನ ಪತ್ನಿ 8-9 ತಿಂಗಳಿನಿಂದ ಅನೈತಿಕ ಸಂಬಂಧ ಹೊಂದಿದ್ದು ಆತನಿಗೆ ಪರಾರಿಯಾಗಿರಬಹುದೆಂದು ಪತಿ ಸಲೀಂ ಶಂಕೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!