Friday, June 5, 2026
Homeಕರಾವಳಿಉಡುಪಿಕುಂದಾಪುರ: ಮಕ್ಕಳನ್ನು ಮನೆಯಲ್ಲಿ ಬಿಟ್ಟು ಮಹಿಳೆ ನಾಪತ್ತೆ

ಕುಂದಾಪುರ: ಮಕ್ಕಳನ್ನು ಮನೆಯಲ್ಲಿ ಬಿಟ್ಟು ಮಹಿಳೆ ನಾಪತ್ತೆ

- Advertisement -
- Advertisement -

ಕುಂದಾಪುರ: ಮಕ್ಕಳನ್ನು ಮನೆಯಲ್ಲಿ ಬಿಟ್ಟು ಮಹಿಳೆ ನಾಪತ್ತೆಯಾಗಿರುವ ಘಟನೆ ಕುಂದಾಪುರ ಸಮೀಪದ ಕೋಟೇಶ್ವರ ಎಂಬಲ್ಲಿ ನಡೆದಿದೆ. ಉತ್ತರ ಪ್ರದೇಶದ ಮಹದೇವ ಎಂಬವರ ಪತ್ನಿ ಅಂಜಲಿ ನಾಪತ್ತೆಯಾದ ಮಹಿಳೆ.ಗಂಡ ಕೆಲಸಕ್ಕೆ ಹೋದಾಗ ಅಂಜಲಿ ಎರಡು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕಾಣೆಯಾಗಿದ್ದಾರೆ

ಮಹದೇವ (32) ಬಾರಾಬನರೆ, ಉತ್ತರಪ್ರದೇಶ ಇವರು ಸುಮಾರು 25 ದಿನಗಳ ಹಿಂದೆ ಉತ್ತರ ಪ್ರದೇಶದಿಂದ ಕೆಲಸ ಹುಡುಕಿಕೊಂಡು ಉಡುಪಿಗೆ ಬಂದು ಅಲ್ಲಿಂದ ಕೋಟೇಶ್ವರಕ್ಕೆ ಬಂದು ಕೋಟೇಶ್ವರ ಗ್ರಾಮದಲ್ಲಿರುವ ಸನ್‌ ರೈಸ್‌ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಹೆಂಡತಿ ಅಂಜಲಿ ಪ್ರಾಯ 28 ವರ್ಷ ಮತ್ತು ಮಗಳು ಶಶಿ(8) ಮಗ ಆದರ್ಶ ಕುಮಾರ್‌ (4) ರವರ ಜೊತೆ ಕೋಟೇಶ್ವರದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ 07/07/2025 ರಂದು ಬೆಳಿಗ್ಗೆ 06:30 ಗಂಟೆಗೆ ಮಹದೇವ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದು ಹೆಂಡತಿ ಮಕ್ಕಳು ಮನೆಯಲ್ಲಿ ಇದ್ದರು ಬೆಳಿಗ್ಗೆ 10:00 ಗಂಟೆಗೆ ಫ್ಯಾಕ್ಟರಿಯಿಂದ ವಾಪಾಸ್ಸು ಮನೆಗೆ ಬಂದಾಗ ಹೆಂಡತಿ ಅಂಜಲಿ ಇಲ್ಲದೇ ಇದ್ದು ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು ಎಲ್ಲಾ ಕಡೆ ಹುಡುಕಾಡಿ ನಂತರ ಮಹದೇವ್ ಅವರ ಊರು ಮನೆ ಹಾಗೂ ತನ್ನ ಹೆಂಡತಿಯ ಮನೆಗೂ ಕೂಡ ಕರೆ ಮಾಡಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!