Thursday, June 4, 2026
Homeಕರಾವಳಿವಿಟ್ಲ: ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆ ನಾಪತ್ತೆ

ವಿಟ್ಲ: ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆ ನಾಪತ್ತೆ

- Advertisement -
- Advertisement -

ವಿಟ್ಲ: ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ‌ ವಿಟ್ಲದಲ್ಲಿ‌ ನಡೆದಿದೆ. ಈ ಬಗ್ಗೆ ಆಕೆಯ ಪತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಕಡಂಬು ನಿವಾಸಿ ನಾಗೇಶ್ ರವರ ಪತ್ನಿ ಕವಿತ ನಾಪತ್ತೆಯಾದವರು.

ವಿಟ್ಲದ ಸ್ವೀಟ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕವಿತಾರವರು ಅ.29ರಂದು ಕೆಲಸ ಮುಗಿಸಿ ತನ್ನ ತಾಯಿಮನೆಗೆ ತೆರಳುವುದಾಗಿ ಗಂಡನಲ್ಲಿ ತಿಳಿಸಿ ತೆರಳಿದ್ದರು. ಆದ್ರೆ ರಾತ್ರಿಯಾದರೂ ಕವಿತಾರವರು ತಾಯಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಸಹೋದರ ಗಿರೀಶ್ ರವರು ನಾಗೇಶ್ ರವರಿಗೆ ಕರೆ ಮಾಡಿ ಸಹೋದರಿ ಬಂದಿಲ್ಲ ಎಂದು ತಿಳಿಸಿದ್ದರು.

ಕೂಡಲೇ ನಾಗೇಶ್ ರವರು ಮನೆಗೆ ತೆರಳುವ ದಾರಿಯ ಸಹಿತ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರು. ಆದರೆ ಕವಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!