Monday, April 29, 2024
Homeತಾಜಾ ಸುದ್ದಿ7 ವರ್ಷಗಳಿಂದ ಮಕ್ಕಳಿಲ್ಲ ಎಂದು‌ ಕೊರಗುತ್ತಿದ್ದವರಿಗೆ ಭರ್ಜರಿ‌ ಉಡುಗೊರೆ‌ ಕೊಟ್ಟ ದೇವರು: ಒಂದೇ ಬಾರಿ 5...

7 ವರ್ಷಗಳಿಂದ ಮಕ್ಕಳಿಲ್ಲ ಎಂದು‌ ಕೊರಗುತ್ತಿದ್ದವರಿಗೆ ಭರ್ಜರಿ‌ ಉಡುಗೊರೆ‌ ಕೊಟ್ಟ ದೇವರು: ಒಂದೇ ಬಾರಿ 5 ಮಕ್ಕಳನ್ನು ಕರುಣಿಸಿದ ಭಗವಂತ

spot_img
- Advertisement -
- Advertisement -

ರಾಜಸ್ಥಾನ; 7  ವರ್ಷಗಳಿಂದ ಮಕ್ಕಳಿಲ್ಲ‌  ಕೊರಗುತ್ತಿದ್ದ ದಂಪತಿಗೆ ದೇವರು‌ ಒಂದೇ ಬಾರಿ 5 ಮಕ್ಕಳನ್ನು ಕರುಣಿಸಿದ್ದಾನೆ.

ರಾಜಸ್ಥಾನದ ಕರೌಲಿ ಜಿಲ್ಲೆಯ ಮಸಲ್​ಪುರದ ಪಿಪ್ರಾನಿ ಗ್ರಾಮದ ಅಶ್ಕ್ ಅಲಿ ಹಾಗೂ ರೇಷ್ಮಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಹಲವು ಕಡೆ ಹರಕೆಗಳನ್ನು ಹೊತ್ತಿದ್ದಾರೆ. ದೇವರಲ್ಲಿ ತಮ್ಮ ಪ್ರಾರ್ಥನೆ ನಡೆಸಿದ್ದರು.

ಇದಲ್ಲದೆ ಹಲವು ವೈದ್ಯರನ್ನು ಕೂಡ   ಭೇಟಿಯಾಗಿದ್ದರು. ಅದರೂ ಏನೂ ಪ್ರಯೋಜನವಾಗಿರಲಿಲ್ಲ. 7 ವರ್ಷದ ಬಳಿಕ ರೇಶ್ಮಾ  ಗರ್ಭವತಿಯಾಗಿದ್ದು  ಐದು ಆರೋಗ್ಯವಂತ ಮಕ್ಕಳಿಗೆ ಜನ್ಮ  ನೀಡಿದ್ದಾರೆ.

ರೇಷ್ಮಾ ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇವರಲ್ಲಿ ಇಬ್ಬರು ಗಂಡು ಮತ್ತು 3 ಹೆಣ್ಣು ಮಕ್ಕಳು.

ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಆಶಾ ಮೀನಾ‌ ಇದು ನನ್ನ ಸರ್ವೀಸ್ ನಲ್ಲಿ ಹೊಸ ಅನುಭವ ಎಂದು ಹೇಳಿದ್ದು,ತಾಯಿ ಮತ್ತು ಮಕ್ಕಳು ಎಲ್ಲರೂ ಚೆನ್ನಾಗಿದ್ದಾರೆ‌ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!