Sunday, June 7, 2026
Homeಕರಾವಳಿಉಡುಪಿಉಡುಪಿ: ಕಾರ್ಕಳದ ಮಹಿಳೆಗೆ 11 ಲಕ್ಷ ಪಂಗನಾಮ ಹಾಕಿದ ಫೇಸ್ ಬುಕ್ ಗೆಳತಿ

ಉಡುಪಿ: ಕಾರ್ಕಳದ ಮಹಿಳೆಗೆ 11 ಲಕ್ಷ ಪಂಗನಾಮ ಹಾಕಿದ ಫೇಸ್ ಬುಕ್ ಗೆಳತಿ

- Advertisement -
- Advertisement -

ಡುಪಿ: ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋ ಮಾತು ಈ ಮಹಿಳೆಗೆ ಚೆನ್ನಾಗಿಯೇ ಒಪ್ಪುತ್ತೆ ಅನ್ಸುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರನ್ನು ನಂಬಿ ಮೋಸ ಹೋಗುವ ಹತ್ತಾರು ಸುದ್ದಿಗಳನ್ನು ನಾವು ಆಗಾಗ್ಗೆ ಓದುತ್ತಲೇ ಇರುತ್ತೇವೆ. ಹೀಗಿದ್ರು ಕೆಲವರು ಮೋಸ ಹೋಗ್ತಾನೆ ಇರ್ತಾರೆ.

ಇದೀಗ ಅಂತಹದ್ದೇ ಘಟನೆಯೊಂದು ಕಾರ್ಕಳದಲ್ಲಿ ನಡೆದಿದೆ. ಫೇಸ್ ಬುಕ್ ನ ಗೆಳತಿಯೊಬ್ಬಳನ್ನು ನಂಬಿ ಮಹಿಳೆಯೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ 38 ವರ್ಷದ ನಿವಾಸಿಯೊಬ್ಬರಿಗೆ ಫೇಸ್‌ ಬುಕ್‌ ಮೂಲಕ ಮಾರ್ಕ್‌ ಸೀಮಾ ಎಂಬವರು ಪರಿಚಯವಾಗಿದೆ.ಗೆಳೆತನದಲ್ಲಿ ಅವರು ತಮ್ಮ ವಿಳಾಸವನ್ನು ನೀಡಿದ್ದರು. ಅವರ ನಂಬರಿನಿಂದ ಸುನಿತಾ ಕುಮಾರಿ ಎಂಬವರು ಮಹಿಳೆಗೆ ಲಂಡನ್ ನಿಂದ ಚಿನ್ನದ ವಸ್ತು ಮತ್ತು ಪೌಂಡು ಹಣ ಪಾರ್ಸೆಲ್ ಬಂದಿದೆ ಎಂದು ಹೇಳಿ ಅದರ ಕಸ್ಟಮ್ ಚಾರ್ಜ್ ಹಾಗೂ ಐ.ಟಿ ರೈಡ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ.

ಕಾರ್ಕಳದ ಮಹಿಳೆಯು ಹಂತ ಹಂತವಾಗಿ ಗೂಗಲ್‌ಪೇ ಮೂಲಕ ಒಟ್ಟು 11,94,490 ರೂ ಹಣವನ್ನು ವರ್ಗಾವಣೆ ಮಾಡಿದ್ದಾರೆ.ಬಳಿಕ ತಾನು ಮೋಸ ಹೋಗಿರೋದು ಗೊತ್ತಾಗಿದೆ. ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 60/2024ಕಲಂ: 66 (ಸಿ) (ಡಿ) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!