- Advertisement -
- Advertisement -
ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಸಾವನಪ್ಪಿದ ಘಟನೆ ಬೈಕಂಪಾಡಿಯಲ್ಲಿ ನೀಲಗೀರಿಸ್ ಅಂಗಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ನಡೆದಿದೆ.
ಹೊಸಬೆಟ್ಟುವಿನ ನವನಗರದ ರಿಜೇಂಟ್ ಪಾರ್ಕ್ ಬಳಿಯ ನಿವಾಸಿ ಮೋಹನ್ ಅವರ ಪತ್ನಿ ಉಷಾ ಮೃತ ಮಹಿಳೆ. ಉಷಾ ಅವರು ಹೊಸಬೆಟ್ಟುವಿನ ರಾಘವೇಂದ್ರ ಮಠಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ ಈ ಅಪಘಾತ ಸಂಭವಿಸಿತ್ತು. ರಸ್ತೆಗೆ ಬಿದ್ದ ಉಷಾ ಅವರ ಹಣೆಗೆ ಜಜ್ಜಿದ ಗಾಯವಾಗಿತ್ತು. ಬಲಗಾಲಿನ ಮೂಳೆ ಮುರಿದಿತ್ತು. ಬಲ ಹಾಗೂ ಎಡ ಕೈಗಳಲ್ಲಿ ತರಚಿದ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಿಂದಾಗಿ ದ್ವಿಚಕ್ರ ವಾಹನ ಸವಾರ ರವಿಚಂದ್ರನ್ ಅವರೂ ಗಾಯಗೊಂಡಿದ್ದು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಪೊಲೀಸರು ಮಾಹಿತಿ ನೀಡಿದ್ದಾರೆ.
- Advertisement -