ಪುತ್ತೂರು : ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಪುತ್ತೂರಿನ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ
ಕರ್ನೂರು ಮೊಹಮ್ಮದ್ ಬಶೀರ್ ಕೆ.ಎ.ಅವರ ಪತ್ನಿ ಆಯಿಷತ್ ಸೌಜಾನ ಮೃತ ಮಹಿಳೆ.
ಆಯಿಷತ್ ಸೌಜಾನ ಅವರನ್ನು ಜೂ.27ರಂದು ಹೆರಿಗೆಗಾಗಿ ಆಕೆಯ ಗಂಡ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಆರೈಕೆಯಲ್ಲಿ ಜುಬೈದಾ ಕಾವು ಅವರು ಇದ್ದರು. ಜು. 1ರಂದು ಬೆಳಿಗ್ಗೆ 05.30 ಗಂಟೆಗೆ ಆಯಿಷತ್ ಸೌಜಾನರಿಗೆ ಸಾಮಾನ್ಯ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಆ ಬಳಿಕ ಆಕೆಗೆ ವಿಪರೀತ ರಕ್ತಸ್ರಾವ ಉಂಟಾಗಿದ್ದರಿಂದ ಕಾಸರಗೋಡು ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಯಿಷತ್ ಸೌಜಾನರವರು ವಿಪರೀತ ರಕ್ತಸ್ರಾವದಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಅವರ ಅಣ್ಣ ಜಾಲ್ಲೂರು ಸಣ್ಣಕದಿಕೆ ಮಹಮ್ಮದ್ ಶಿಹಾಬುದ್ದೀನ್ ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.