- Advertisement -
- Advertisement -
ಕಡಬ; ತೋಟಕ್ಕೆ ದನಗಳಿಗೆ ಹುಲ್ಲು ತರಲು ಹೋದ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಬಲ್ಯ ಗ್ರಾಮದ ದೇರಾಜೆಯಲ್ಲಿ ನಡೆದಿದೆ. ಕುಶಾಲವತಿ ಮೃತ ಮಹಿಳೆ.
ತೋಟಕ್ಕೆ ಹುಲ್ಲಿಗೆಂದು ಹೋದ ಕುಶಾಲವತಿ ಅವರು ಕಾಲುಜಾರಿ ಕೆರೆಗೆ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕುಶಾಲವತಿ ಅವರ ಮಗ ಪ್ರಜ್ವಲ್ ಎಂಬಾತ ಶಾಲೆಯಿಂದ ಮನೆಗೆ ಬಂದು ಸಂಜೆ ನೋಡಿದಾಗ ತಾಯಿ ಮನೆಯಲ್ಲಿರಲಿಲ್ಲ. ಹೀಗಾಗಿ ತೋಟಕ್ಕೆ ಹೋಗಿ ನೋಡಿದಾಗ ಹುಲ್ಲು ಕಟ್ಟಲು ಕೊಂಡು ಹೋದ ಹಗ್ಗ ಕೆರೆ ಬಳಿ ಇದ್ದದ್ದನ್ನು ನೋಡಿ ಕೆರೆಗೆ ಇಣುಕಿದ್ದಾನೆ. ಆಗ ಕುಶಾಲವತಿಯವರ ಮೃತದೇಹ ಕೆರೆಯಲ್ಲಿ ಕಂಡು ಬಂದಿದೆ.
ಕೂಡಲೇ ಆತ ಕರೆ ಮಾಡಿ ಕುಶಾಲವತಿ ಅವರ ಅಕ್ಕ ಗೀತಾ ಅವರಿಗೆ ತಿಳಿಸಿದ್ದಾನೆ. ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -