Thursday, July 16, 2026
Homeಕರಾವಳಿಮಂಗಳೂರುಬೆಳ್ತಂಗಡಿ:ಕೆಎಸ್ಆರ್ ಟಿಸಿ ಮಹಿಳಾ ಕಂಡೆಕ್ಟರ್ ನಿಂದ ಪ್ರಯಾಣಿಕನಿಗೆ ಹಲ್ಲೆ

ಬೆಳ್ತಂಗಡಿ:ಕೆಎಸ್ಆರ್ ಟಿಸಿ ಮಹಿಳಾ ಕಂಡೆಕ್ಟರ್ ನಿಂದ ಪ್ರಯಾಣಿಕನಿಗೆ ಹಲ್ಲೆ

- Advertisement -
- Advertisement -

ಬೆಳ್ತಂಗಡಿ:ಕೆಎಸ್ಆರ್ ಟಿಸಿ ಮಹಿಳಾ ಕಂಡೆಕ್ಟರ್ ಪ್ರಯಾಣಿಕನಿಗೆ ಹಲ್ಲೆ ಮಾಡಿರುವ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ‌ ನಡೆದಿದೆ. ಹಾಸನ ಮೂಲದ ಪುಷ್ಪ ಹಲ್ಲೆ ಮಾಡಿದ ಮಹಿಳಾ ಕಂಡಕ್ಟರ್.ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಘಟನೆ ನಡೆದಿದೆ.

ಟಿಕೆಟ್ ಹಣ ಕೊಟ್ಟಿಲ್ಲ ಅಂತ ಪ್ರಯಾಣಿಕ ಆರೋಪಿಸಿದ್ರೆ ಕಂಡಕ್ಟರ್ ಕೊಟ್ಟಿದ್ದೇನೆ ಅಂತಾ ವಾದಿಸಿದ್ದಾರೆ. ಕೊನೆಗೆ ಪ್ರಯಾಣಿಕ ಮತ್ತು ಮಹಿಳಾ ಕಂಡಕ್ಟರ್ ಮಧ್ಯೆ ವಾಗ್ವಾದ ಉಂಟಾಗಿದೆ. ಈ ವೇಳೆ ಮೊಬೈಲ್ ನಲ್ಲಿ ಕಂಡೆಕ್ಟರ್ ನ ವಾಗ್ವಾದವನ್ನ ಪ್ರಯಾಣಿಕ ಚಿತ್ರೀಕರಣ ಮಾಡಿದ್ದಾನೆ. ಇದರಿಂದ‌ ರೊಚ್ಚಿಗೆದ್ದ ಮಹಿಳಾ ಕಂಡೆಕ್ಟರ್ ಪ್ರಯಾಣಿಕನಿಗೆ ಹಲ್ಲೆ ಮಾಡಿದ್ದಾರೆ.

ಇಬ್ಬರ ಜಗಳದಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದಾರೆ. ಬಳಿಕ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬೆಳ್ತಂಗಡಿ KSRTC ಟ್ರಾಫಿಕ್ ಕಂಟ್ರೋಲರ್ ಬದಲಿ ವ್ಯವಸ್ಥೆ ಮಾಡಿದ್ದಾರೆ.

- Advertisement -

Latest News

error: Content is protected !!