Thursday, June 4, 2026
Homeತಾಜಾ ಸುದ್ದಿಖೋಟಾ ನೋಟು ಸಹಿತ ಮಹಿಳೆಯನ್ನು ಬಂಧಿಸಿದ ಪೊಲೀಸರು

ಖೋಟಾ ನೋಟು ಸಹಿತ ಮಹಿಳೆಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಹಾಸನ: ಖೋಟಾ ನೋಟು ಸಹಿತ ಮಹಿಳೆಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. ಮಹಿಳೆಯ ಬಗ್ಗೆ ಹೆಚ್ಚೇನು ಮಾಹಿತಿಗಳು ಲಭ್ಯವಾಗಿಲ್ಲ.

ಹೋಟೆಲ್ ಮುಂಭಾಗದಲ್ಲಿ ಆರೋಪಿ ಮಹಿಳೆ ಪೊಲೀಸರನ್ನು ಕಂಡೊಡನೇ  ಹೋಟೆಲ್ ಒಳಗೆ ಓಡಿ ಬಾತ್​ರೂಂ ಸೇರಿಕೊಂಡಿದ್ದಾಳೆ. ಅನುಮಾನಗೊಂಡ ಪೊಲೀಸರು ಆಕೆಯ ಬೆನ್ನಟ್ಟಿ ಹೋಗಿ ಹಿಡಿದು, ಪರಿಶೀಲಿಸಿದಾಗ ಆಕೆಯ ಬಳಿ ಖೋಟಾ ನೋಟುಗಳ ಬಂಡಲ್​ ಪತ್ತೆಯಾಗಿವೆ.

ಖೋಟಾ ನೋಟು ಬಂಡಲ್ ನೀಡಲು ನಕಾರ ವ್ಯಕ್ತಪಡಿಸಿದ ಮಹಿಳೆ, ಗಾಬರಿಗೆ ಕೆಲ ಹಿಡಿ ನೋಟುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾಳೆ. ಸದ್ಯ ಮಹಿಳೆ ಹಾಗೂ ಓರ್ವ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ.

ಸಕಲೇಶಪುರದ ದೋಣಿಗಾಲ್ ಬಳಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಬಾಡಿಗೆ ಕಾರಿನಲ್ಲಿ ಬಂದಿದ್ದಳು. ಖೋಟಾ ನೋಟು ವಾಪಾಸ್ ಕಿತ್ತುಕೊಳ್ಳಲು ಕೆಲಕಾಲ ಮಹಿಳೆ ಪೊಲಿಸ್ ಜತೆ ಜಟಾಪಟಿಗೆ ಇಳಿದಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!