- Advertisement -
![]()
- Advertisement -
ಚಿಕ್ಕಮಗಳೂರು : ಆನೆ ದಾಳಿಗೆ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ (45) ಮೃತ ದುರ್ದೈವಿ.
ಯಲ್ಲಪ್ಪ ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ತಿರುವಳ್ಳಿ ಮೂಲದವರು. ನಾಗೇಶ್ ಗೌಡರ ತೋಟದ ಮೂಲಕ ಶ್ರೀಧರ್ ಗೌಡ ಅವರ ತೋಟದ ಲೈನ್ ಮನೆಗೆ ಹೋಗುವಾಗ ಆನೆ ದಾಳಿ ಮಾಡಿ ಕೊಂದು ಹಾಕಿದೆ.
ಕೂಲಿ ಕೆಲಸ ಹಾಗೂ ಗಾರೆ ಕೆಲಸ ಮಾಡಿ ಮೃತ ಕಾರ್ಮಿಕ ಯಲ್ಲಪ್ಪ ಜೀವನ ಸಾಗಿಸುತ್ತಿದ್ದರು.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ಯಲ್ಲಪ್ಪ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ರೈತರು ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
- Advertisement -


