Friday, April 26, 2024
Homeಕರಾವಳಿಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ಹೋಗೋ ಪ್ಲ್ಯಾನ್ ನಲ್ಲಿದ್ದವರಿಗೆ ಬೇಸರದ ಸುದ್ದಿ: ಮಾರ್ಚ್ 1 ರಿಂದ ...

ಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ಹೋಗೋ ಪ್ಲ್ಯಾನ್ ನಲ್ಲಿದ್ದವರಿಗೆ ಬೇಸರದ ಸುದ್ದಿ: ಮಾರ್ಚ್ 1 ರಿಂದ ಕುಮಾರಪರ್ವತಕ್ಕೆ ಚಾರಣ ನಿಷೇಧ

spot_img
- Advertisement -
- Advertisement -

ಸುಬ್ರಮಣ್ಯ: ಕುಮಾರಪರ್ವತಕ್ಕೆ ಟ್ರಕ್ಕಿಂಗ್ ಹೋಗೋ ಪ್ಲ್ಯಾನ್ ಮಾಡದವರಿಗೆ ಬೇಸರದ ಸುದ್ದಿಯೊಂದು ಇಲ್ಲಿದೆ. ಮಾರ್ಚ್ 1 2021 ರಿಂದ ಮುಂದಿನ ಆದೇಶದವರೆಗೆ ಕುಮಾರಪರ್ವತ ಚಾರಣವನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಪಶ್ಚಿಮಘಟ್ಟದ ಶೋಲಾ ಅರಣ್ಯಕ್ಕೆ ಬೇಸಿಗೆ ಕಾಲದಲ್ಲಿ ಬೆಂಕಿ ತಗಲುವ ಕಾರಣ ಹಾಗೂ ಮಳೆಗಾಲದಲ್ಲಿ ಭೂ ಕುಸಿತವಾಗುವ ಕಾರಣ ಕುಮಾರಪರ್ವತ ಚಾರಣಕ್ಕೆ ಮುಂದಿನ ಮಳೆಗಾಲದ ಅಂತ್ಯದವರೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಇದು ಟ್ರಕ್ಕಿಂಗ್ ಪ್ರಿಯರಿಗೆ ಬೇಸರ ತರಿಸಿದೆ. ಆದರೆ ಸ್ಥಳೀಯರಿಗೆ ಕೊಂಚ ನೆಮ್ಮದಿ ತರಿಸಿದೆ.

ಇಷ್ಟು ದಿನಗಳ ಕಾಲ, ಕೆಲ ಬೇಜವಾಬ್ದಾರಿ ಚಾರಣಿಗರು ದಾರಿಯುದ್ದಕ್ಕೂ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುವುದು ಮತ್ತು ಬೊಬ್ಬೆ, ಶಿಳ್ಳೆ ಹೊಡೆದು ಮಾನಗೆಟ್ಟವರಂತೆ ವರ್ತಿಸುತ್ತಿದ್ದರು. ಇನ್ನಾದರೂ ಕಾಡು ಪ್ರಾಣಿಗಳು ಮತ್ತು ಮರ ಗಿಡಗಳು ತನ್ನ ಪಾಡಿಗೆ ಹಾಯಾಗಿರಲಿ ಎಂದು ಪರಿಸರ ಪ್ರಿಯರು ಖುಷಿ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!