Monday, May 6, 2024
Homeಕ್ರೀಡೆಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 5 ನೇ ಚಿನ್ನ; ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ...

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 5 ನೇ ಚಿನ್ನ; ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಗೆ ಚಿನ್ನ!

spot_img
- Advertisement -
- Advertisement -

ಟೋಕಿಯೋ: ಪುರುಷರ ಬ್ಯಾಡ್ಮಿಂಟನ್ ಎಸ್​ಹೆಚ್​6 ವಿಭಾಗದ ಫೈನಲ್ ಪಂದ್ಯದಲ್ಲಿ ಕೃಷ್ಣ ನಗರ್ ಭರ್ಜರಿ ಗೆಲುವು ಸಾಧಿಸಿದ್ದು, ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಹಾಂಕಾಂಗ್​ನ ಚು ಮನ್ ಕೈ ವಿರುದ್ಧ ನಡೆದ ಮೆಡಲ್ ಪಂದ್ಯದಲ್ಲಿ ಕೃಷ್ಣ 2-1 ಸೆಟ್​ಗಳ ಅಂತರದಿಂದ ಗೆದ್ದು ಭಾರತಕ್ಕೆ 5ನೇ ಚಿನ್ನ ತಂದುಕೊಟ್ಟಿದ್ದಾರೆ.

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೃಷ್ಣ ನಗರ್ ಮೊದಲ ಸೆಟ್​ನಲ್ಲೇ 21-17 ಅಂಕಗಳ ಮುನ್ನಡೆ ಸಾಧಿಸಿದರು. ಎರಡನೇ ಸೆಟ್​ನಲ್ಲಿ ಕಮ್​ಬ್ಯಾಕ್ ಮಾಡಿದ ಚು ಮನ್ ಕೈ 21-16 ಅಂಕಗಳಿಂದ ಗೆದ್ದು ಸಮಬಲ ಸಾಧಿಸಿದರು. ಅಂತಿಮ ಸೆಟ್​ನಲ್ಲಿ ಊಹಿಸಲಾಗದ ರೀತಿ ಆಟವಾಡಿದ ಕೃಷ್ಣ ರೋಚಕ ಗೆಲುವು ಸಾಧಿಸಿ ಗೆಲುವನ್ನು ತಮ್ಮತ್ತ ಸೆಳೆಯುವಂತೆ ಮಾಡಿದರು.

ಈ ಮೂಲಕ ಒಟ್ಟಾರೆಯಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ​ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇದರಲ್ಲಿ ಚಿನ್ನ 5 ಗೆದ್ದಿದ್ದರೆ, ಬೆಳ್ಳಿ 8 ಮತ್ತು 6 ಕಂಚಿನ ಪದಕ ಭಾರತ ಬಾಜಿಕೊಂಡಿದೆ.

- Advertisement -
spot_img

Latest News

error: Content is protected !!