- Advertisement -
- Advertisement -
ಪುತ್ತೂರು; ಸಹಪಾಠಿಯಿಂದ ಯುವತಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕೃಷ್ಣ ಜಿ ರಾವ್ ನನ್ನು ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇನ್ನು ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಜೆ ರಾವ್ ಎರಡು ದಿನಗಳಲ್ಲಿ ಬಂಧಿಸಲು ಇಂದು ಶಾಸಕ ಅಶೋಕ್ ರೈ ಜಿಲ್ಲಾ ಎಸ್ಪಿ ಯವರಿಗೆ ಸೂಚನೆ ನೀಡಿದ್ದರು. ಎಸ್ಪಿ ಅವರಿಗೆ ಕರೆ ಮಾಡಿದ ಶಾಸಕ ಅಶೋಕ್ ರೈ ಅವರು ಆರೋಪಿ ಎಲ್ಲೇ ಇದ್ದರೂ ಆತನನ್ನು ಬಂಧಿಸಬೇಕು. ಆರೋಪಿಯನ್ನು ಇಷ್ಟು ದಿನ ಬಂಧಿಸದೇ ಇರುವುದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತಂಡವನ್ನು ರಚನೆಮಾಡಿ ಆರೋಪಿಯನ್ನು ಎರಡು ದಿನದೊಳಗೆ ಬಂಧಿಸಬೇಕು ಮತ್ತು ನೊಂದ ಯುವತಿಗೆ ನ್ಯಾಯವನ್ನೂ ಕೊಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು.ಇಲಾಖೆಗೆ ನನ್ನಿಂದ ಏನು ಸಹಾಯ ಬೇಕಿದ್ದರೆ ತಿಳಿಸಬೇಕು ಎಂದು ಶಾಸಕರು ಹೇಳಿದ್ದರು.ಅದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ.
- Advertisement -