Friday, June 5, 2026
Homeಆರಾಧನಾಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ; ದೇಶ ವಿದೇಶಗಳ ಭಕ್ತರಿಂದ ದೀಕ್ಷೆ ಸಂಪೂರ್ಣ

ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ; ದೇಶ ವಿದೇಶಗಳ ಭಕ್ತರಿಂದ ದೀಕ್ಷೆ ಸಂಪೂರ್ಣ

- Advertisement -
- Advertisement -

ಉಡುಪಿ: ಲೋಕ ಕಲ್ಯಾಣಾರ್ಥವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯದಲ್ಲಿ ಸಂಕಲ್ಪಿಸಿದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ದೇಶ ವಿದೇಶಗಳ ಭಕ್ತರು ಈಗಾಗಲೇ ಪಡೆದಿದ್ದು, ಅವರಲ್ಲಿ ಅನೇಕರು ಉತ್ಸಾಹದಿಂದ ಲೇಖನವನ್ನು ಸಂಪೂರ್ಣಗೊಳಿಸಿದ್ದಾರೆ.

ಶ್ರೀಪಾದರು ಭಕ್ತರಿಂದ ಶ್ರೀಕೃಷ್ಣನಿಗೆ ಶ್ರದ್ಧಾ ಭಕ್ತಿಯಿಂದ ಬರೆದಿರುವ ಗೀತಾ ಲೇಖನ ಪುಸ್ತಕವನ್ನು ಸ್ವೀಕರಿಸಿ ಶ್ರೀಕೃಷ್ಣನಿಗೆ ಸಮರ್ಪಣೆ ಪ್ರಾರಂಭಿಸಿದ್ದಾರೆ. ಈಗಾಗಲೇ ಬರೆದು ಮುಗಿಸಿದವರು ಪರ್ಯಾಯ ಅವಧಿಯಲ್ಲಿ ಉಡುಪಿಗೆ ಭೇಟಿ ನೀಡಿ ಶ್ರೀಪಾದರ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸಿ ಪ್ರಸಾದವನ್ನು ಸ್ವೀಕರಿಸುವಂತೆ ಶ್ರೀಮಠದ ಪ್ರಕಟನೆ ತಿಳಿಸಿದೆ.

- Advertisement -

Latest News

error: Content is protected !!