Friday, June 5, 2026
Homeಕರಾವಳಿಮಂಗಳೂರು; ಕಳ್ಳ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರ ಬಂಧನ

ಮಂಗಳೂರು; ಕಳ್ಳ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರ ಬಂಧನ

- Advertisement -
- Advertisement -

ಮಂಗಳೂರು;ದ್ವಿಚಕ್ರ ವಾಹನದಲ್ಲಿ ಸಾಗಿಸಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಿ.ಸಿ ರೋಡ್ ನಿವಾಸಿ ನಿಜಾಮುದ್ದೀನ್ (32), ಜೆಪ್ಪು ನಿವಾಸಿ ರಾಫಿ(31) ಬಂಧಿತರು.ಬಂಧಿತರಿಂದ 500ರೂ.ಮುಖಬೆಲೆಯ 4.5 ಲಕ್ಷ ರೂ.ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ‌.

ನಂತೂರು ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ಕಂಡು ಸ್ಕೂಟರ್ ನಲ್ಲಿ ಬಂದ ಇಬ್ಬರು ಸವಾರರು ಅತಿವೇಗದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.ಇವರನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ತಡೆದು ಪರಿಶೀಲಿಸಿದಾಗ ಅವರ ಬಳಿ ಖೋಟಾ ನೋಟು ಕಂಡುಬಂದಿದೆ.ಬೆಂಗಳೂರಿನ ಡ್ಯಾನಿಯಲ್ ಎಂಬಾತನಿಂದ‌ ನೋಟುಗಳನ್ನು ಪಡೆದು ಇವರು ಮಂಗಳೂರಿನಲ್ಲಿ ಚಲಾವಣೆಗೆ ಯತ್ನಿಸಿದ್ದರು ಎನ್ನಲಾಗಿದೆ.ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!