Friday, June 5, 2026
Homeಕರಾವಳಿಉಡುಪಿಮೂಕಾಂಬಿಕಾ ದೇವಸ್ಥಾನದಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಲಭ ಸಂಪರ್ಕ: ರೋಪ್ ವೇ ಯೋಜನೆಯ ಡಿಪಿಆರ್ ‌ಗೆ ಚಾಲನೆ

ಮೂಕಾಂಬಿಕಾ ದೇವಸ್ಥಾನದಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಲಭ ಸಂಪರ್ಕ: ರೋಪ್ ವೇ ಯೋಜನೆಯ ಡಿಪಿಆರ್ ‌ಗೆ ಚಾಲನೆ

- Advertisement -
- Advertisement -

ಉಡುಪಿ:ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯುಪಿಐಎಲ್ ಸಂಸ್ಥೆ ಮೂಲಕ ರೋಪ್ ವೇ ಯೋಜನೆಯ ಡಿಪಿಆರ್ ‌ಗೆ ಚಾಲನೆ ದೊರೆಯಿತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಡಿಪಿಆರ್ ತಯಾರಿಗೆ ಚಾಲನೆ ನೀಡಿದರು.

ಅವರು ಮಾತನಾಡಿ ಈ ಹಿಂದೆಯೇ ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ಕಲ್ಪಿಸುವ ಬಗ್ಗೆ ತನಗೆ ಮಹತ್ವಾಕಾಂಕ್ಷೆಯ ಕನಸಿತ್ತು . ಭಾರತದಲ್ಲಿಯೇ ಅತೀ ಉದ್ದವಾದ ರೋಪ್ ‍ವೇ ಇದಾಗಿದ್ದು 6-8 ಕಿ.ಮೀ ಉದ್ದ ಇರಲಿದೆ. ಯುರೋಪಿಯನ್ ಮಾದರಿಯಲ್ಲಿ ಈ ಯೋಜನೆ ರೂಪುಗೊಳ್ಳಲಿದ್ದು ಇದರಿಂದ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಎಂದು ತಿಳಿಸಿದರು.ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಬದಲಿಗೆ ಅಭಿವೃದ್ಧಿಗೆ ಪೂರಕ ವಾಗಲಿದೆ ಎಂದರು.

- Advertisement -

Latest News

error: Content is protected !!