Saturday, July 18, 2026
Homeತಾಜಾ ಸುದ್ದಿಕಾಲೇಜ್ ವೊಂದರ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಸನ್ನಿ ಲಿಯೋನ್...!

ಕಾಲೇಜ್ ವೊಂದರ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಸನ್ನಿ ಲಿಯೋನ್…!

- Advertisement -
- Advertisement -

ನವದೆಹಲಿ: ಕೋಲ್ಕತಾ ಕಾಲೇಜೊಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಮೆರಿಟ್ ಪಟ್ಟಿಯಲ್ಲಿ ತಪ್ಪಾಗಿ ಹೆಸರಿಸಿದೆ. ಸ್ಕ್ರೀನ್‌ಶಾಟ್ ವೈರಲ್ ಆದ ನಂತರ ಮತ್ತು ನಟಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ನಂತರ, ಕಾಲೇಜು ದೋಷವನ್ನು ಸರಿಪಡಿಸಿತು.

ಇದಕ್ಕೆ ಟ್ವೀಟ್ ಮಾಡಿರುವ ಸನ್ನಿ ಲಿಯೋನ್ ‘ಮುಂದಿನ ಸೆಮಿಸ್ಟರ್‌ನಲ್ಲಿ ಕಾಲೇಜಿನಲ್ಲಿ ಸಿಗೋಣ !!! ನೀವು ನನ್ನ ಕ್ಲಾಸ್ ನಲ್ಲಿ ಇರುತ್ತೀರಿ ಎಂದು ಭಾವಿಸುತ್ತೇನೆ’ ಎಂದು ಹಾಸ್ಯಯುಕ್ತ ಇಮೊಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಆಶುತೋಷ್ ಕಾಲೇಜಿನ ವೆಬ್ ಸೈಟ್ ನಲ್ಲಿ ಮೆರಿಟ್ ಪಟ್ಟಿ ಬಿಡುಗಡೆಯಾಗಿದ್ದು, ಬಿಎ ಇಂಗ್ಲಿಷ್ ಪದವಿ ಶಿಕ್ಷಣಕ್ಕೆ ಆಯ್ಕೆಯಾದವರ ಮೆರಿಟ್ ಪಟ್ಟಿಯಲ್ಲಿ ಮೊದಲ ಹೆಸರೇ ಸನ್ನಿ ಲಿಯೋನ್ ಅವರದ್ದಿದೆ. ಈ ಪಟ್ಟಿ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಕುಚೋದ್ಯ ಮಾಡುವ ಸಲುವಾಗಿಯೇ ಇಂಥದ್ದೊಂದು ಪಟ್ಟಿಯನ್ನು ತಯಾರಿಸಿ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಆಡಳಿತ ಮಂಡಳಿ, ಅರ್ಜಿ ಸಂಖ್ಯೆ 9513008704 ಹಾಗೂ ನೋಂದಣಿ ಸಂಖ್ಯೆ 207777-6666 ರಲ್ಲಿ ಸನ್ನಿ ಲಿಯೋನ್ ಹೆಸರು ಹೇಗೆ ಬಂತು ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಆಂತರಿಕ ತನಿಖೆ ನಡೆಸುವುದಾಗಿ ಹೇಳಿದೆ.

- Advertisement -

Latest News

error: Content is protected !!