- Advertisement -
- Advertisement -
ಕೊಕ್ಕಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಅಕ್ಕಿ ಮತ್ತು ಸಾಮಾನುಗಳನ್ನು ವಿತರಿಸುತಿದ್ದ ಹೈಲ್ಯಾಡ್ ಇಲ್ಲಾಮಿಕ್ ಫಾರಮ್ ಸಂಘಟನೆಗೆ ಸೇರಿದ ಯುವಕರನ್ನು ಧರ್ಮಸ್ಥಳ ಠಾಣೆಯ ಉಪ ನೀರೀಕ್ಷಕರಾದ ಓಡಿಯಪ್ಪ ಗೌಡ ಮತ್ತು ಅವರ ತಂಡ ಬಂಧಿಸಿದೆ.
ಬಂಧಿತರನ್ನು ಟಿಪ್ಪು ಸುಲ್ತಾನ್, ಅಬ್ದುಲ್ ಅಜೀಜ್, ಸಿದ್ದಿಕ್ ಹಾಗೂ ರೆಹಮಾನ್ ಎಂದು ಗುರುತಿಸಲಾಗಿದೆ.
ಈ ಯುವಕರ ತಂಡ ಸ್ಥಳೀಯ ಪೊಲೀಸರಿಗೆ ಮತ್ತು ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡದೆ ಅಕ್ಕಿ ಮತ್ತು ಸಾಮಾನುಗಳನ್ನು ವಿತರಿಸುತಿದ್ದರು. ಬಂಧಿತರಿಂದ ಒಂದು ಪಿಕಪ್ ವಾಹನವನ್ನು ವಶಪಡಿಸಲಾಗಿದೆ.
- Advertisement -