Thursday, June 27, 2024
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಕಿಸಾನ್ ಸಮ್ಮಾನ್ 17ನೇ ಕಂತು ಬಿಡುಗಡೆ ವೀಕ್ಷಣೆ; ವೈಜ್ಞಾನಿಕ ಕೃಷಿಯ ಯಶಸ್ವಿ ಕೃಷಿಕರಿಗೆ ಅಭಿನಂದನೆ

ಮಂಗಳೂರಿನಲ್ಲಿ ಕಿಸಾನ್ ಸಮ್ಮಾನ್ 17ನೇ ಕಂತು ಬಿಡುಗಡೆ ವೀಕ್ಷಣೆ; ವೈಜ್ಞಾನಿಕ ಕೃಷಿಯ ಯಶಸ್ವಿ ಕೃಷಿಕರಿಗೆ ಅಭಿನಂದನೆ

spot_img
- Advertisement -
- Advertisement -

ಮಂಗಳೂರು: ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತು ನೇರ ವರ್ಗಾವಣೆ ಮೂಲಕ ಬಿಡುಗಡೆಗೊಳಿಸುವ ಕಾರ್ಯಕ್ರಮದ ವೀಕ್ಷಣೆ ಮಂಗಳೂರಿನಲ್ಲಿ ನಡೆಯಿತು.

ಮಂಗಳೂರಿನ ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜು ಕ್ಯಾಂಪಸ್ ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೇರ ನಗದು ವರ್ಗಾವಣೆಯ ನೇರ ಪ್ರಸಾರದ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸನ್ನು ಕಂಡ ಕೃಷಿಕರಾದ ಚಂದ್ರಶೇಖರ ಗಟ್ಟಿ, ದಯಾನಂದ ಕುಲಾಲ್ ಮತ್ತು ಕೆನ್ಯೂಟ್ ಅರಾಹ್ನ ಅವರನ್ನು ಅಭಿನಂದಿಸಲಾಯಿತು.

ದೇಶದ ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನಲ್ಲಿ 20 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

- Advertisement -
spot_img

Latest News

error: Content is protected !!