Thursday, April 25, 2024
Homeಕರಾವಳಿಕಾಡ್ಗಿಚ್ಚಿಗೆ ನಲುಗಿ ಹೋದ ಚಾರ್ಮಾಡಿ ಅರಣ್ಯಪ್ರದೇಶ; 15  ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್...

ಕಾಡ್ಗಿಚ್ಚಿಗೆ ನಲುಗಿ ಹೋದ ಚಾರ್ಮಾಡಿ ಅರಣ್ಯಪ್ರದೇಶ; 15  ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಆರೀಫ್

spot_img
- Advertisement -
- Advertisement -

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯದ ವ್ಯಾಪ್ತಿಗೆ ಸೇರುವ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶ ಕಳೆದ ಕೆಲವು ದಿನಗಳಿಂದ ಕಾಡ್ಗಿಚ್ಚಿಗೆ ತುತ್ತಾಗಿದ್ದು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಪ್ರಾಣಿ ಪಕ್ಷಿಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿವೆ.

ಅದರಲ್ಲೂ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಾವುಗಳು ಕಾಡು ಬಿಟ್ಟು ನಾಡು ಸೇರುತ್ತಿದ್ದು ಜನರ ಆತಂಕ ಹೆಚ್ಚಿಸಿದೆ. ಇನ್ನು ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತುರುವೆ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಆಶ್ರಯ ಪಡೆದುಕೊಳ್ಳಲು ಜಾಗ ಹುಡುಕುತ್ತಿರುವಾಗ ಸ್ಥಳಿಯರ ಕಣ್ಣಿಗೆ ಬಿದ್ದು ಸೆರೆಯಾಗಿದೆ. ತುರುವೆ ಗ್ರಾಮದ ಸಮುದಾಯ ಭವನದ ಬಳಿ ಬಂದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪ ಬೆಚ್ಚನೆಯ ಜಾಗ ಹುಡುಕುತ್ತಿದ್ದ ವೇಳೆ ಸ್ಥಳೀಯರ ಗಮನಿಸಿದ್ದಾರೆ.ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಅರ್ಧ ಗಂಟೆಗಳ ಕಾರ್ಯಾಚರಣೆ ನಡೆಸಿ ದೈತ್ಯ ಕಾಳಿಂಗನನ್ನ ಸೆರಿ ಹಿಡಿದಿದ್ದಾರೆ.

ಸೆರೆ ಹಿಡಿದು ಬಳಿಕ ತೀವ್ರ ನಿತ್ರಾಣಗೊಂಡಿದ್ದ ಕಾಳಿಂಗ ಸರ್ಪಕ್ಕೆ ನೀರು ಕುಡಿಸಿದ್ದಾರೆ. ಈ ಕಾಳಿಂಗ ಸರ್ಪ ಎಷ್ಟು ದೈತ್ಯಾಕಾರವಿದೆ ಅಂದ್ರೆ, ಸೆರೆ ಹಿಡಿದ ಸ್ನೇಕ್ ಆರೀಫ್ ಅದನ್ನ ಎತ್ತಿಕೊಳ್ಳಲು ಕಷ್ಟಪಡಬೇಕಾದಷ್ಟು ಭಾರವಾಗಿತ್ತು ಕೊನೆಗೆ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚಾರ್ಮಾಡಿ ಘಾಟಿಯಲ್ಲೇ ಬೆಂಕಿ ಬೀಳದ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆದರೆ, ಚಾರ್ಮಾಡಿ ಘಾಟಿಯ ಸುತ್ತಮುತ್ತಲಿನ ಜನ ಭಯದಲ್ಲಿ ಬದುಕುವಂತಾಗಿದೆ. ಅರಣ್ಯಕ್ಕೆ ಬಿದ್ದಿರೋ ಬೆಂಕಿ ನಿಲ್ಲುವಂತೆ ಕಾಣುತ್ತಿಲ್ಲ. ಮೂರು ದಿನಗಳಿಂದ ಒಂದೇ ಸಮನೆ ಹೊತ್ತಿ ಧಗಧಗಿಸುತ್ತಿದೆ. ಈ ವೇಳೆ ಕಾಡುಪ್ರಾಣಿಗಳು ಕಾಡಂಚಿನ ಗ್ರಾಮಗಳಿಗೆ ಬಂದರೆ ಏನು ಮಾಡುವುದು ಎಂಬ ಭಯದಲ್ಲಿದ್ದಾರೆ.

- Advertisement -
spot_img

Latest News

error: Content is protected !!