Thursday, June 25, 2026
Homeತಾಜಾ ಸುದ್ದಿಖುಷ್ಬೂ ಹೊಸ ಅವತಾರ ನೋಡಿ ಶಾಕ್ ಆದ ಅಭಿಮಾನಿಗಳು

ಖುಷ್ಬೂ ಹೊಸ ಅವತಾರ ನೋಡಿ ಶಾಕ್ ಆದ ಅಭಿಮಾನಿಗಳು

- Advertisement -
- Advertisement -

ಹೈದರಾಬಾದ್: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಖುಷ್ಬೂ ಇದೀಗ ರೂಪಾಂತರದ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಖುಷ್ಬೂ ಇತ್ತೀಚಿಗೆ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಕಾರಣ ಆ ಫೋಟೋದಲ್ಲಿ ನಟಿ ಖುಷ್ಬೂ ಪುರುಷ ಅವತಾರತಾಳಿದ್ದಾರೆ.

ಫೇಸ್ ಆಪ್ ಮೂಲಕ ನಟಿ ಖುಷ್ಬೂ ತಮ್ಮ ಫೋಟೋವನ್ನು ಎಡಿಟ್ ಮಾಡಿ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆ ಫೋಟೋಗೆ, “ನಾನು ಪುರುಷನಾಗಿದ್ದರೆ ಅಷ್ಟೇನು ಕೆಟ್ಟದಾಗಿ ಕಾಣುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಗುವ ಎಮೋಜಿಯನ್ನು ಹಾಕಿಕೊಂಡಿದ್ದಾರೆ.

ನಟಿ ಖುಷ್ಬೂ ಫೋಟೋ ಶೇರ್ ಮಾಡಿದ ತಕ್ಷಣ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಫೋಟೋ ನೋಡಿ ಅಚ್ಚರಿ ಪಟ್ಟಿದ್ದಾರೆ. ಇನ್ನೂ ಕೆಲವರು ಪುರುಷ ಖುಷ್ಬೂ ಸುಂದರವಾಗಿ ಕಾಣಿಸುತ್ತಾರೆ ಎಂದು ಹೇಳುತ್ತಿದ್ದಾರೆ.

- Advertisement -

Latest News

error: Content is protected !!