Thursday, June 4, 2026
Homeಕರಾವಳಿಕೆಎಫ್ ಡಿಸಿ ಫಿಶ್ ಫ್ರೈ ಮಸಾಲಾ ಮಾರುಕಟ್ಟೆಗೆ ಬಿಡುಗಡೆ

ಕೆಎಫ್ ಡಿಸಿ ಫಿಶ್ ಫ್ರೈ ಮಸಾಲಾ ಮಾರುಕಟ್ಟೆಗೆ ಬಿಡುಗಡೆ

- Advertisement -
- Advertisement -

ಮಂಗಳೂರು: ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಕೆಎಫ್‌ಡಿಸಿ ಫಿಶ್ ಫ್ರೈ ಮಸಾಲಾ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.ಕೆಎಫ್ ಡಿಸಿ ಮಂಗಳೂರಿನ ಹೊಯ್ಗೆ ಬಜಾರ್ ಕಚೇರಿಯಲ್ಲಿ ಮೀನುಗಾರಿಕೆ ನಿರ್ದೇಶಕರಾದ ದಿನೇಶಕುಮಾರ್ ಹೆಚ್. ಕಳ್ಳೇರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕೆಎಫ್ ಡಿಸಿ ಕೆ ಗಣೇಶ್, ವ್ಯವಸ್ಥಾಪಕ ನಿರ್ದೇಶಕ ಕೆ. ಗಣೇಶ್, ಕಾರವಾರ ವಲಯ ಮೀನುಗಾರಿಕೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ, ಕೆಎಫ್ ಡಿಸಿ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಸೇರಿದಂತೆ ಉಪನಿರ್ದೇಶಕರುಗಳು ಹಾಗೂ ಕೆಎಫ್‌ಡಿಸಿಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.

200 ಗ್ರಾಂ ಪ್ಯಾಕ್‌ 100 ರೂಪಾಯಿ ಬೆಲೆಯಲ್ಲಿ ಕೆಎಫ್‌ಡಿಸಿ ಮುಖ್ಯ ಕಛೇರಿ, ಚಿಲಿಂಬಿ, ಬೆಂಗಳೂರು ಕಬ್ಬನ್ ಪಾರ್ಕ್, ತುಮಕೂರು ಮತ್ತು ಕೆಎಫ್‌ಡಿಸಿಯ ಮಳಿಗೆಗಳಲ್ಲಿ ದೊರೆಯಲಿದೆ.ಪರಿಚಯಾತ್ಮಕ ಕೊಡುಗೆಯಾಗಿ ಪ್ರತಿ ಪ್ಯಾಕ್‌ಗೆ 90 ರೂಪಾಯಿ ಬೆಲೆಗೆ ಲಭ್ಯವಿದೆ.

- Advertisement -

Latest News

error: Content is protected !!