Saturday, June 6, 2026
Homeತಾಜಾ ಸುದ್ದಿಮೊತ್ತ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಪಡೆದ ಕೇರಳದ ಮುಸ್ಲಿಂ ಮಹಿಳೆ ನಿಧನ

ಮೊತ್ತ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಪಡೆದ ಕೇರಳದ ಮುಸ್ಲಿಂ ಮಹಿಳೆ ನಿಧನ

- Advertisement -
- Advertisement -

ಕೇರಳ;ಮೊತ್ತ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಪಡೆದ ಮುಸ್ಲಿಂ ಮಹಿಳೆ ಎಂಬ ಖ್ಯಾತಿ ಪಡೆದ ಕೇರಳದ ಮರಿಯುಮ್ಮ ಕೊನೆಯುಸಿರೆಳೆದಿದ್ದಾರೆ.

ತಲಶ್ಶೇರಿಯ ಟಿಸಿ ಮುಕ್ಕ್‌ನ ಪುದಿಯ ಮಾಳಿಯೇಕಲ್ ತರವಾಡ್ ನ‌ 99 ವರ್ಷದ ಮರಿಯುಮ್ಮ ನಿಧನಕ್ಕೆ ಕೇರಳ ಸಿಎಂ ಪಿಣರಾಯ್ ವಿಜಯನ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಬ್ರಿಟೀಷ್ ಕಾಲದಲ್ಲಿ ಮುಸ್ಲಿಂ ಯುವತಿಯರು ಇಂಗ್ಲಿಷ್ ಶಿಕ್ಷಣದಿಂದ ದೂರ ಉಳಿದಿದ್ದರು. ಈ ಕಾಲದಲ್ಲಿ ಮಂಗಳೂರಿನ ಸೇಕ್ರೆಡ್ ಹಾರ್ಟ್ ಎಂಬ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣವನ್ನು ಮರಿಯಮ್ಮ ಪಡೆದಿದ್ದರು.

ಮರಿಯುಮ್ಮ ಉತ್ತಮವಾಗಿ ಇಂಗ್ಲೀಷ್ ಜ್ಞಾನ ಹೊಂದಿದ್ದು, ಇಂಗ್ಲಿಷ್ ನಲ್ಲಿ ಭಾಷಣವನ್ನು ಮಾಡುತ್ತಿದ್ದರು.

- Advertisement -

Latest News

error: Content is protected !!