Thursday, June 4, 2026
HomeWorldಯುಎಸ್ ನಲ್ಲಿ ಕೇರಳ ಮೂಲದ ಯುವತಿ ಮೇಲೆ ಹತ್ಯೆ..!

ಯುಎಸ್ ನಲ್ಲಿ ಕೇರಳ ಮೂಲದ ಯುವತಿ ಮೇಲೆ ಹತ್ಯೆ..!

- Advertisement -
- Advertisement -

ಯುನೈಟೆಡ್​ ಸ್ಟೇಟ್ಸ್​​ನಲ್ಲಿದ್ದ ಕೇರಳದ 19 ವರ್ಷದ ಯುವತಿಯ ಹತ್ಯೆ ಮಾಡಲಾಗಿದ್ದು ಇದಕ್ಕೆ ಸೂಕ್ತ ಕಾರಣ ಏನೆಂದು ತಿಳಿದು ಬಂದಿಲ್ಲ. ಯುಎಸ್​ನ ಅಲಬಾಮಾ ರಾಜಧಾನಿ ಮ್ಯಾಂಟ್ಗೋಮೆರಿಯಲ್ಲಿ ಈ ಯುವತಿ ವಾಸವಾಗಿದ್ದ ಕೇರಳ ಮೂಲದ ಯುವತಿಯ ಮೇಲೆ ಹತ್ಯೆ ಮಾಡಲಾಗಿದೆ . ಈ ಬಗ್ಗೆ ಮ್ಯಾಂಟ್ಗೋಮೆರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಗ ಹೂ

ಮೃತ ಯುವತಿಯನ್ನು ಮರಿಯಾಮ್​ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಮ್ಮ ಮನೆಯೊಳಗೆ ಮಲಗಿದ್ದರು. ಮಹಡಿಯ ಸೀಲಿಂಗ್​​ ಬೇಧಿಸಿ​ ಬುಲೆಟವೊಂದು ತೂರಿಕೊಂಡು ಬಂದು ಇವರ ದೇಹವನ್ನು ಹೊಕ್ಕಿದೆ. ಸುಸಾನ್​ ಮೂಲತಃ ಕೇರಳದ ತಿರುವಲ್ಲಾದವರು. ಇಲ್ಲಿನ ನಿರಣಂ ಸಮೀಪದ ಎಡಪ್ಪಲ್ಲಿ ಪರಂಬಿಲ್​ ಮನೆಯ ಬೋಬನ್​ ಮ್ಯಾಥ್ಯೂ ಮತ್ತು ಬಿನ್ಸಿ ದಂಪತಿಯ ಪುತ್ರಿಯಾಗಿದ್ದು, ಬಸಿಲ್ ಮತ್ತು ಬಿಮಲ್​ ಎಂಬ ಇಬ್ಬರು ಸೋದರರೂ ಇದ್ದಾರೆ.

, ಮರಿಯಮ್ ಸುಸಾನ್ ಮ್ಯಾಥ್ಯೂ ಅವರು ತಮ್ಮ ಮನೆಯಲ್ಲಿ ಮಲಗಿದ್ದರು. ಈ ವೇಳೆ ಆಕೆಯ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದವರು ಗುಂಡು ಹಾರಿಸಿದ್ದಾರೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಸುಸಾನ್ ಮೃತದೇಹವನ್ನು ಕೇರಳದ ಆಕೆಯ ಹುಟ್ಟೂರಿಗೆ ತಿರಲು ಸಿದ್ಧತೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ ಅಂತ ಸೌತ್​ವೆಸ್ಟ್ ಅಮೆರಿಕದ ಮಲಂಕರಾ ಆರ್ಥಡೆಕ್ಸ್​ ಚರ್ಚ್​​ ಡಯಾಸಿಸ್​ನ ಫಾದರ್​ ಜಾನ್ಸನ್​ ಪಾಪಚ್ಚನ್​ ಯುವತಿ ಸಾವನ್ನಪಿದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಕಳೆದ ಏಳು ದಿನಗಳಲ್ಲಿ ಮ್ಯಾಂಟ್ಗೊಮೇರಿಯಲ್ಲಿ ನಡೆದ ಎರಡನೇ ಶೂಟೌಟ್​ ಪ್ರಕರಣ ಇದಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಥ್ಯಾಂಕ್ಸ್​ಗಿವಿಂಗ್​ ಹಾಲಿಡೇ ಆಚರಣೆ ಸಮಾರಂಭ ನಡೆದಿತ್ತು. ಈ ವೇಳೆ ಯುವಕನೊಬ್ಬನಿಗೆ ಗುಂಡು ಹೊಡೆದು ಕೊಲ್ಲಲಾಗಿತ್ತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!