Thursday, June 4, 2026
Homeಕರಾವಳಿಕಾಸರಗೋಡು80 ಲಕ್ಷ ಕದ್ದು ಓಡುತ್ತಿದ್ದವನನ್ನು ಹಿಡಿದ ಕೇರಳದ ವ್ಯಕ್ತಿ

80 ಲಕ್ಷ ಕದ್ದು ಓಡುತ್ತಿದ್ದವನನ್ನು ಹಿಡಿದ ಕೇರಳದ ವ್ಯಕ್ತಿ

- Advertisement -
- Advertisement -

ದುಬೈ : 80 ಲಕ್ಷ ಹಣವನ್ನು ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಕೇರಳದ ವ್ಯಕ್ತಿಯೊಬ್ಬರು ಫುಟ್ಬಾಲ್ ಶೈಲಿಯ ಟ್ರಿಕ್ಸ್ ನಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದುಬೈ ನಲ್ಲಿ ನಡೆದಿದೆ.

ಕೇರಳ ಮೂಲದ 40 ವರ್ಷದ ಜಾಫರ್  ದುಬೈನಲ್ಲಿ ತನ್ನ ಸಂಬಂಧಿಯೊಬ್ಬರ ಕೆಫೆಟೇರಿಯಾದಲ್ಲಿದ್ದಾಗ ವ್ಯಕ್ತಿಯೊಬ್ಬ ಹಣದೊಂದಿಗೆ ಓಡೋದನ್ನು ನೋಡಿದ್ದಾರೆ. ಈ ವೇಳೆ, ಅಲ್ಲಿದ್ದವರೆಲ್ಲಾ ಕಳ್ಳನನ್ನು ಹಿಡಿಯಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ.. ಕಳ್ಳನನ್ನು ನೋಡಿದ ಜಾಫರ್ ಓಡುತ್ತಿದ್ದ ಕಳ್ಳನಿಗೆ ತನ್ನ ಕಾಲನ್ನು ಅಡ್ಡವಾಗಿ ಹಿಡಿದಿದ್ದಾರೆ. ಪರಿಣಾಮ, ವೇಗವಾಗಿ ಓಡುತ್ತಿದ್ದ ಕಳ್ಳ ಅರೆಕ್ಷಣದಲ್ಲಿ ದೊಪ್ಪನೆ ನೆಲಕ್ಕುರುಳಿದ್ದ, ನಂತರ ಜನರು ಈ ಕಳ್ಳನನ್ನು ಹಿಡಿದಿದ್ದಾರೆ.

ಏಪ್ರಿಲ್ 14ರಂದು ಬನಿಯಾ ಸ್ಕ್ವೇರ್ ಲ್ಯಾಂಡ್‌ಮಾರ್ಕ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇದಾದ ಬಳಿಕ ಕಳ್ಳನನ್ನು ಹಿಡಿದ ಜನರು ಈತನನ್ನು ಪೊಲೀಸರಿಗೊಪ್ಪಿಸಿದ್ದಾರೆ. ಜೊತೆಗೆ, ಈತ ಕದ್ದ ಹಣ ಕೂಡಾ ಮಾಲೀಕರ ಕೈಸೇರಿದೆ.

- Advertisement -

Latest News

error: Content is protected !!