Thursday, June 4, 2026
Homeಕರಾವಳಿಮಹಿಳೆಯರು, ಯುವತಿಯರೇ ಇವರ ಟಾರ್ಗೇಟ್ : ಮಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ ನ್ನು ಬಂಧಿಸಿದ ಪೊಲೀಸರು

ಮಹಿಳೆಯರು, ಯುವತಿಯರೇ ಇವರ ಟಾರ್ಗೇಟ್ : ಮಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ ನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು:  ಮದುವೆಯಾದ ಮಹಿಳೆಯರು ಹಾಗೂ ಯುವತಿಯರನ್ನು ಟಾರ್ಗೇಟ್ ಮಾಡಿಕೊಂಡು ಅವರಿಂದ ನಂಬರ್ ಪಡೆದುಕೊಂಡು ಅವರನ್ನು ದೈಹಿಕವಾಗಿ ಬಳಕೆ ಮಾಡಿಕೊಂಡು ಅವರಿಂದ ಹಣ ದೋಚುತ್ತಿದ್ದ ಖದೀಮರ ಗ್ಯಾಂಗ್ ಒಂದನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಇಂದು ಪೊಲೀಸರು 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೊಂದು ಇಂತಹದ್ದೇ ಗ್ಯಾಂಗ್ ಒಂದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅದರಂತೆ ಮೂವರನ್ನು ಬಂಧಿಸಿದ್ದಾರೆ.

ಮೊಹಮ್ಮದ್ ಮುನೀರ್, ಪೊಳಲಿ ನಿವಾಸಿ ತಸ್ವಿನ್‌ ಹಾಗೂ ಕೈಕಂಬ ನಿವಾಸಿ ಸಾದಿಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಮೊಹಮ್ಮದ್ ಮುನೀರ್ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ ಅವರು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಈ ಖದೀಮರು ಮೊದಲು ಮಹಿಳೆಯರು ಹಾಗೂ ಯುವತಿಯರ ನಂಬರ್ ಸಂಗ್ರಹಿಸುತ್ತಿದ್ದರು. ಆ ಬಳಿಕ ತಮ್ಮದಲ್ಲದ ಕಾರುಗಳಲ್ಲಿ ಬಂದು ಶ್ರೀಮಂತರಂತೆ ಪೋಸು ನೀಡುತ್ತಿದ್ದರು. ಬಳಿಕ ಹೆಣ್ಣು ಮಕ್ಕಳನ್ನು ಕಾರಿನಲ್ಲಿ ಕರೆದೊಯ್ಯಲು ಆರಂಭಿಸುತ್ತಾರೆ. ಬಳಿಕ ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಈಗ ಬಂಧನಕ್ಕೊಳಗಾಗಿರುವ ಮುನೀರ್ ಎಂಬಾತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಅಪರಾಧಿ ಹಿನ್ನೆಲೆಯನ್ನು ಹೊಂದಿದವನಾಗಿದ್ದಾನೆ. ಅಲ್ಲದೇ ಸ್ಥಳೀಯರು ಇವರಿಗೆ ಉನ್ನತ ವ್ಯಕ್ತಿಗಳ ಸಂಪರ್ಕವಿದೆ ಎನ್ನುತ್ತಿದ್ದಾರೆ. ಹೀಗಾಗಿ ಯಾವುದೇ ಭಯವಿಲ್ಲದೇ ಇವರು ತಮ್ಮ ಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ. ಮಹಿಳೆಯರನ್ನು ಲೈಂಗಿಕವಾಗಿ ಬಳಸಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇದಕ್ಕೆ ಬೆದರಿ ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಚಿನ್ನಾಭರಣಗಳನ್ನು ನೀಡಿ ಬಲಿಪಶುಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

.                                           

- Advertisement -

Latest News

error: Content is protected !!