Saturday, June 28, 2025
Homeಕರಾವಳಿಬೆಳ್ತಂಗಡಿ : ಒಬ್ಬಂಟಿ ಕಳ್ಳನಿಂದ ಬೆಳ್ತಂಗಡಿ ಅಂಗಡಿ ಮಾಲೀಕರಿಗೆ ಆತಂಕ;ಪೊಲೀಸರ ನಿದ್ದೆಗೆಡಿಸುತ್ತಿದೆ ಮಿಡ್ ನೈಟ್ ಕಳ್ಳನ...

ಬೆಳ್ತಂಗಡಿ : ಒಬ್ಬಂಟಿ ಕಳ್ಳನಿಂದ ಬೆಳ್ತಂಗಡಿ ಅಂಗಡಿ ಮಾಲೀಕರಿಗೆ ಆತಂಕ;ಪೊಲೀಸರ ನಿದ್ದೆಗೆಡಿಸುತ್ತಿದೆ ಮಿಡ್ ನೈಟ್ ಕಳ್ಳನ ಕರಾಮತ್ತು

spot_img
- Advertisement -
- Advertisement -

ಬೆಳ್ತಂಗಡಿ : ಹಲವು ತಿಂಗಳಿನಿಂದ ಬೆಳ್ತಂಗಡಿಯ ಸುತ್ತಮುತ್ತ ಕಳ್ಳತನ ನಡೆಯುತ್ತಿದ್ದು ಇದರಿಂದ ಅಂಗಡಿ ಮಾಲೀಕರಿಗೆ ಆತಂಕವಾಗುತ್ತಿದ್ದು ಅದಲ್ಲದೆ ಒಬ್ಬಂಟಿ ಕಳ್ಳನ ಮಧ್ಯರಾತ್ರಿ ಪ್ರಯಾಣ ಜಾಸ್ತಿಯಾಗುತ್ತಿರುವುದರಿಂದ  ಬೆಳ್ತಂಗಡಿ ಪೊಲೀಸರಿಗೆ ನಿದ್ದೆಗೆಡುವಂತೆ ಮಾಡಿದೆ.

ಬೆಳ್ತಂಗಡಿಯಲ್ಲಿ ಕೆಲ ತಿಂಗಳಿನಿಂದ ಅನೇಕ ಅಂಗಡಿಗಳಿಗೆ ಮಧ್ಯರಾತ್ರಿ ನುಗ್ಗಿ ಹಣ ಕಳ್ಳತನ ನಡೆಸುತ್ತಿದ್ದು ಈ ವರೆಗೂ ಕಳ್ಳ ಮಾತ್ರ ಪತ್ತೆಯಾಗುತ್ತಿಲ್ಲ. ಅಂಗಡಿಗಳಿಗೆ ನುಗ್ಗಿ ಹಣ ಕಳ್ಳತನ ನಡೆಸುವುದು, ನಿಲ್ಲಿಸಿದ ಬೈಕ್ ಕಳ್ಳತನ ಮಾಡುವ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಮತ್ತೆ ಕಳ್ಳ ಕೈಚಳಕ ತೋರಿಸಿದ್ದು ಆದ್ರೆ ಏನೂ ಸಿಗದೆ ಬರಿಗೈಯಲ್ಲಿ ವಾಪಸ್ ಹೋಗಿದ್ದಾನೆ.

ಮೋಟಾರ್ ಡ್ರೈವಿಂಗ್ ಸ್ಕೂಲ್ ಗೆ ಕನ್ನ: ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಗಾರ್ಡನ್ ಬಾರ್ ಪಕ್ಕದಲ್ಲಿರುವ ಬಿರ್ಮೋಟ್ಟು ಮೋಟಾರು ಡ್ರೈವಿಂಗ್ ಸ್ಕೂಲ್ ಗೆ ಜ.12 ರಂದು ಮಧ್ಯರಾತ್ರಿ ಸುಮಾರು 1:56 ವೇಳೆಗೆ ಶಟರಿನ ಬೀಗ ಮುರಿದು ಒಳನುಗ್ಗಿದ ಕಳ್ಳ ಹಣಕ್ಕಾಗಿ ದಾಖಲೆಗಳನ್ನು ಮತ್ತು ಕಪಾಟುಗಳನ್ನು ಜಾಲಾಡಿದ್ದು ಅಲ್ಲಿ ಏನೂ ಸಿಗದೆ ಕೊನೆಗೆ ಬರಿಗೈಯಲ್ಲಿ ವಾಪಸ್ ಹೋಗಿದ್ದಾನೆ. ಈ ಬಗ್ಗೆ ಮಾಲೀಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳ್ಳತನಕ್ಕೂ ಮುನ್ನ ಸಿಸಿಕ್ಯಾಮೆರಾ & ಲೈಟ್ ಆಫ್: ಗಾರ್ಡನ್ ಬಾರ್  ಹಿಂಭಾಗದಲ್ಲಿರುವ ನಿಸರ್ಗ ಹೋಟೆಲ್ ನ ಸಿಸಿ ಕ್ಯಾಮೆರಾಕ್ಕೆ ಬಟ್ಟೆ ಕಟ್ಟಿ ನಂತರ ವಿದ್ಯುತ್ ಬಲ್ಬ್ ತೆಗೆದು ಕೆಳಗಡೆ ಇಟ್ಟು ಅಲ್ಲಿಂದ ನೇರ 3 ಸ್ಟಾರ್ ವೈನ್ ಶಾಪ್ ಬಳಿ ಬಂದು ಪಕ್ಕದ ಗುರಕೃಪಾ ಹೋಟೆಲ್ ಶಟರಿನ ಬೀಗ ಮುರಿಯಲು ಯತ್ನಿಸಿದ್ದು ಅಲ್ಲಿ ಏನೂ ಮಾಡಲು ಆಗದಿದ್ದಾಗ ಅಲೆದಾಡಿ ನಂತರ ಅಲ್ಲಿದ್ದ ಲೈಟ್ ಅಫ್ ಮಾಡಿ ನೇರ ಗಾರ್ಡನ್ ಬಾರ್ ಹಿಂಬದಿಯ ಮೂಲಕ ಬಂದು ಅಲ್ಲಿ ಕೂಡ ಬಾರ್ ನ ಸಿಸಿಕ್ಯಾಮಕ್ಕೆ ಬಟ್ಟೆ ಕಟ್ಟಿ ಲೈಟ್ ತೆಗೆದು ಪಕ್ಕದ ರೂಂ ಇರುವುದನ್ನು  ನೋಡಿದ್ದು ಒಳಗಡೆ ಇದ್ದವರು ಯಾವುದೇ ಶಬ್ದಕ್ಕೆ ಯಾರು ಕೂಡ ಹೊರಬಾರದಂತೆ ಬಾಗಿಲಿನ ಲಾಕ್ ಗೆ ಹಗ್ಗ ಕಟ್ಟಿ ಮೋಟರ್ ಡ್ರೈವಿಂಗ್ ಸ್ಕೂಲ್ ಶಾಪಿನ ಶಟರ್ ಬೀಗ ಮುರಿದು ನುಗ್ಗಿದ್ದಾನೆ. ಬೆಳಗ್ಗೆ ಇಬ್ಬರು ಬಾರ್ ಸಿಬ್ಬಂದಿ ರೂಂ ನಿಂದ ಹೊರಗಡೆ ಬಂದಾಗ ಕಳ್ಳತನ ಘಟನೆ ಬೆಳಕಿಗೆ ಬಂದಿದೆ‌.

ಒಬ್ಬಂಟಿಯಾಗಿ ಕಳ್ಳತನ: ಕಳ್ಳತನದಲ್ಲಿ ಎಕ್ಸ್ ಪರ್ಟ್ ಆಗಿರುವ ಈ ಒಬ್ಬಂಟಿ ಕಳ್ಳ ಮಿಡ್ ನೈಟ್ ಮಾತ್ರ ಬೆಳ್ತಂಗಡಿ ಬಸ್ ನಿಲ್ದಾಣದ ಸುತ್ತಮುತ್ತ ಸಂಚಾರ ಮಾಡಿ ಕಳ್ಳತನ ಮಾಡುತ್ತಿದ್ದಾನೆ.ಆದ್ರೆ ಈತನ ಬಗ್ಗೆ ಸಾರ್ವಜನಿಕರಿಗೂ ಕೃತ್ಯ ನಡೆಯುವ ವೇಳೆ ತಿಳಿಯುತ್ತಿಲ್ಲ.

ಪೊಲೀಸರ ನಿದ್ದೆಗೆಡಿಸುತ್ತಿರುವ ಒಬ್ಬಂಟಿ ಕಳ್ಳ: ಬೆಳ್ತಂಗಡಿ ಪೊಲೀಸರ ಒಬ್ಬಂಟಿ ಕಳ್ಳನ ಪತ್ತೆಗಾಗಿ ರಾತ್ರಿ ಹಗಲು ನಿದ್ದೆ ಬಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದು ಕಳ್ಳ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಕಣ್ಣಾಮುಚ್ಚಾಲೆ ಆಟವಾಡಿ ಕಳ್ಳತನ ನಡೆಸುತ್ತಿರುವುದು ಬೆಳ್ತಂಗಡಿ ಪೊಲೀಸರಿಗೆ ತಲೆನೋವು ತಂದಿದೆ‌.

- Advertisement -
spot_img

Latest News

error: Content is protected !!