Saturday, June 29, 2024
Homeಕರಾವಳಿಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಕಾಸರಗೋಡು ಮೂಲದ ಕ್ರೈಸ್ತ ಸನ್ಯಾಸಿನಿ!

ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಕಾಸರಗೋಡು ಮೂಲದ ಕ್ರೈಸ್ತ ಸನ್ಯಾಸಿನಿ!

spot_img
- Advertisement -
- Advertisement -

ಕಾಸರಗೋಡು: ಕಾಸರಗೋಡು ಮೂಲದ ಕ್ರೈಸ್ತ ಸನ್ಯಾಸಿನಿಯಾದ ಥೆರೇಸಾ ಕ್ರಾಸ್ತಾ ಎಂಬವರು ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿದ್ದು ಮರಳಿ ಬರಲಾಗದೆ ಒದ್ದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಮೂರು ವರ್ಷಗಳಿಂದ ಕಾಬೂಲ್ ಸಮೀಪದ ಇಟಲಿ ಮೂಲದ ಮಕ್ಕಳ ಕಲಿಕಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮಂಗಳವಾರ ಊರಿಗೆ ಮರಳಲು ತೀರ್ಮಾನಿಸಿದ್ದರು.ಆದರೆ ರವಿವಾರವೇ ತಾಲಿಬಾನ್ ದೇಶದ ಕೇಂದ್ರವನ್ನು ತನ್ನ ಸ್ವಾಧೀನಕ್ಕೆ ಪಡೆದ ಹಿನ್ನೆಲೆಯಲ್ಲಿ ಅವರಿಗೆ ವಾಪಸ್ಸಾಗಲು ಸಾಧ್ಯವಾಗಿಲ್ಲ. ಸದ್ಯ ಸಿಸ್ಟರ್ ಸುರಕ್ಷಿತರಾಗಿದ್ದು, ಈ ಬಗ್ಗೆ ಮನೆಯವರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ನಿವಾಸಿಯಾಗಿರುವ ಥೆರೆಸಾ ಈ ಹಿಂದೆ ನೆಲ್ಯಾಡಿಯ ಕಾನ್ವೆಂಟ್ ಒಂದರಲ್ಲಿ ಸಿಸ್ಟರ್ ಆಗಿದ್ದರು.ನಂತರದಲ್ಲಿ ಜಪ್ಪುನಲ್ಲಿರುವ ಪ್ರಶಾಂತ ನಿವಾಸ ಆಶ್ರಮದಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದರು.

ಮೊದಲಿಗೆ ಇಟಲಿಗೆ ತೆರಳಿ ಅಲ್ಲಿಂದ ಭಾರತಕ್ಕೆ ಮರಳುವ ಯೋಚನೆ ಹೊಂದಿದ್ದ ಥೆರೇಸಾ ಕ್ರಾಸ್ತಾ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ಇರುವುದು ಸಮಸ್ಯೆಗೆ ಕಾರಣವಾಗಿದ್ದು, ಅಫ್ಘಾನಿಸ್ತಾನ ದಲ್ಲಿರುವ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಮಂಗಳೂರಿನ ಸಿಸ್ಟರ್‌ ಆಫ್ ಚಾರಿಟಿಯಲ್ಲಿದ್ದ ಥೆರೆಸಾ ಅವರನ್ನು ಇಟಲಿಯ ಸೇವಾ ಸಂಸ್ಥೆಯು ಕರೆದ ಕಾರಣ ಮೂರು ವರ್ಷಗಳ ಹಿಂದೆ ಕಳಿಸಿಕೊಡಲಾಗಿತ್ತು. ಅವರಿಗೆ ಕಾಬೂಲಿನಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲು ಜವಾಬ್ದಾರಿ ನೀಡಲಾಗಿತ್ತು. ಇತರ ಪಾಕಿಸ್ಥಾನಿ ಮೂಲದ ಸಿಸ್ಟರ್ ಗಳ ಜೊತೆ ಥೆರೆಸಾ ಅಲ್ಲಿದ್ದರು. ಆದರೆ, ಈಗ ತಾಲಿಬಾನಿಗಳು ಅಲ್ಲಿನ ಸರಕಾರವನ್ನು ಕಿತ್ತು ಅಧಿಕಾರಕ್ಕೇರುತ್ತಿದ್ದಂತೆ ಆತಂಕ ಮನೆಮಾಡಿದೆ.

- Advertisement -
spot_img

Latest News

error: Content is protected !!