Friday, June 5, 2026
Homeತಾಜಾ ಸುದ್ದಿನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ಐವರಿಗೆ ಅವಕಾಶ; 3 ಕ್ಯಾಬಿನೆಟ್, 2 ರಾಜ್ಯ ದರ್ಜೆ ಸ್ಥಾನ

ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ಐವರಿಗೆ ಅವಕಾಶ; 3 ಕ್ಯಾಬಿನೆಟ್, 2 ರಾಜ್ಯ ದರ್ಜೆ ಸ್ಥಾನ

- Advertisement -
- Advertisement -

ನವದೆಹಲಿ: ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ರಾಜ್ಯದ ಐವರಿಗೆ ಸಚಿವ ಸ್ಥಾನ ನಿಶ್ಚಿತವಾಗಿದೆ.ರಾಜ್ಯಕ್ಕೆ ಐದು ಸಚಿವ ಸ್ಥಾನಗಳ ಪೈಕಿ ಮೂರು ಸಂಪುಟ ದರ್ಜೆಯ ಮತ್ತು ಎರಡು ರಾಜ್ಯ ದರ್ಜೆಯ ಸಚಿವ ಸ್ಥಾ‌ನ ದೊರೆಯಲಿದೆ.

ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್, ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಮಂಡ್ಯ ಸಂಸದ ಹೆಚ್.ಡಿ. ಕುಮಾರಸ್ವಾಮಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಮತ್ತು ತುಮಕೂರು ಸಂಸದ ವಿ. ಸೋಮಣ್ಣ ರಾಜ್ಯ ದರ್ಜೆ ಸಚಿವರಾಗಿ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಇಂದು ಬೆಳಗ್ಗೆ ಸಂಭಾವ್ಯ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚಹಾ ಕೂಡಾ ನಡೆಸಿದ್ದರು.

- Advertisement -

Latest News

error: Content is protected !!