Friday, June 5, 2026
Homeಕರಾವಳಿಉಡುಪಿಕಾರ್ಕಳ: ನಟೋರಿಯಸ್‌ ದನಕಳ್ಳನ ಹೆಡೆಮುರಿ ಕಟ್ಟಿದ ಕಾರ್ಕಳ ಪೊಲೀಸರು

ಕಾರ್ಕಳ: ನಟೋರಿಯಸ್‌ ದನಕಳ್ಳನ ಹೆಡೆಮುರಿ ಕಟ್ಟಿದ ಕಾರ್ಕಳ ಪೊಲೀಸರು

- Advertisement -
- Advertisement -

ಕಾರ್ಕಳ: ನಟೋರಿಯಸ್‌ ದನ ಕಳ್ಳನನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ನಲ್ಲೂರು ಗ್ರಾಮದ ಬೋರ್ಕಟ್ಟೆ ದೊಡ್ಡಕಜೆಯ ಮೊಹಮ್ಮದ್‌ ಯೂನಸ್‌ (30) ಬಂಧಿತ. 

ಈತನ ಮೇಲೆ ದನಕಳ್ಳತನಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ, ಅಜೆಕಾರು, ಹೆಬ್ರಿ, ಶಿರ್ವ, ಮೂಡುಬಿದಿರೆ ಮಾತ್ರವಲ್ಲದೇ ಚಿಕ್ಕಮಗಳೂರು, ಮೂಡುಗೆರೆ, ಆಲ್ದೂರು ಠಾಣೆಗಳಲ್ಲೂ ಪ್ರಕರಣ ದಾಖಲಾಗಿದ್ದವು. ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. 

ಯೂನಸ್‌ ಗೆ ಸಹಕರಿಸುತ್ತಿದ್ದ ಆತನ ಸಂಬಂಧಿಕ ಮೂಡುಬಿದಿರೆಯ ಜಲೀಲ್‌ (49) ಎಂಬಾತನನ್ನು ಮಾ. 4ರಂದು ಮೂಡುಬಿದಿರೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈತನ ವಿರುದ್ಧ ದನಕಳ್ಳತನಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಹಿರಿಯಡ್ಕ ಜೈಲಿನಲ್ಲಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ.

- Advertisement -

Latest News

error: Content is protected !!