- Advertisement -
![]()
- Advertisement -
ಕಾರ್ಕಳ : ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ, ಸದಸ್ಯ ಮಂಗಳೂರಿನಲ್ಲಿ ಗಂಜಿಮಠದಲ್ಲಿ ವಾಸವಿದ್ದ ಮನೋತೋಷ್ ಕಾಯಲ್(39) ಬಂಧಿತ ಆರೋಪಿ.
ಆರೋಪಿ ಬೆಳಿಗ್ಗೆ ಬೇರೆ ಬೇರೆ ಪ್ರದೇಶಗಳಲ್ಲಿ ತಿರುಗಿ ತುಂಬಾ ದಿನಗಳಿದ್ದ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳತನ ಮಾಡುತ್ತಿದ್ದ. ಈ ಕುರಿತಂತೆ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ ; 163/25 ಕಲಂ 331(3), 305 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಮನೆಯಲ್ಲಿನ ಬ್ಯಾಟರಿಯನ್ನು ಕದ್ದುಕೊಂಡು ಹೋಗಿರುತ್ತಾನೆ.
- Advertisement -


